ಕಾರ್ಯದರ್ಶಿ ರೇಣುಕುಮಾರ್ ಟಾಪ್‌ಸ್ಟಾರ್ ಮಾತನಾಡಿ, ದಿವಂಗತ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಮೊದಲಾದ ಹಿರಿಯರು ಸೇರಿ 1984ರಲ್ಲಿ ಸಂಘ ಸ್ಥಾಪಿಸಿದರು. ಅದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಪ್ರತಿಯೊಂದು ವಲಯದಲ್ಲೂ ಸದಸ್ಯರನ್ನಾಗಿಸಿಕೊಳ್ಳಲು ಸಂಘದ ಸಮಿತಿ ಪ್ರವಾಸ ಕೈಗೊಂಡಿದೆ. ಮೈಸೂರಿನ ಉಸ್ತುವಾರಿ ಪುಟ್ಟಸ್ವಾಮಿ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.