ಸುಧಾರಿತ ತಂತ್ರಜ್ಞಾನ ಆಧರಿಸಿ ಜಯದೇವದಲ್ಲಿ ಯಶಸ್ವಿ ಚಿಕಿತ್ಸೆ: ಡಾ.ಕೆ.ಎಸ್.ಸದಾನಂದ್

ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್ ಅವರನ್ನು ಡಾ. ರಜಿತ್, ಪಿಆರ್‌ಓ ವಾಣಿಮೋಹನ್, ರಮೇಶ್, ಯೋಗಾನಂದ್, ಆನಂದ್, ಪ್ರಕಾಶ್, ರಂಗಸ್ವಾಮಿ, ರವೀಶ್ ಅಭಿನಂದಿಸಿದರು.
ನಗರದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನದ ಅಂಗವಾಗಿ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್ ಅವರನ್ನು ಡಾ. ರಜಿತ್, ಪಿಆರ್‌ಓ ವಾಣಿಮೋಹನ್, ರಮೇಶ್, ಯೋಗಾನಂದ್, ಆನಂದ್, ಪ್ರಕಾಶ್, ರಂಗಸ್ವಾಮಿ, ರವೀಶ್ ಅಭಿನಂದಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಯುನಿಕಾರ್ನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ಆಸ್ಪತ್ರೆ
  • ಕರ್ನಾಟಕದಲ್ಲೇ 4ನೇ ಹಾಗೂ ಜಯದೇವದಲ್ಲೇ ಪ್ರಥಮವಾಗಿ ಈ ಚಿಕಿತ್ಸೆ ನೀಡಿದ ಸಾಧನೆ
ಮೈಸೂರು:ಮೈಸೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ 73 ವರ್ಷದ ವೃದ್ಧೆಗೆ ಡಾ.ಹರ್ಷಬಸಪ್ಪ ಹಾಗೂ ಡಾ.ಶ್ರೀನಿಧಿ ಹೆಗ್ಗಡೆ ನೇತೃತ್ವದ ತಂಡ ಯುನಿಕಾರ್ನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಪಿರಿಯಾಪಟ್ಟಣ ತಾಲೂಕು ಗ್ರಾಮವೊಂದರ ವೃದ್ಧೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದಿದ್ದರಿಂದ ಅಪರೂಪದ ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿ ಟಾವಿ ಚಿಕಿತ್ಸೆಯ ಸಮಯದಲ್ಲಿ ಹೃದಯದ ರಕ್ತನಾಳಗಳಿಗೆ ಉಂಟಾಗಬಹುದಾದ ಮಾರಣಾಂತಿಕ ಅಡಚಣೆ ತಡೆಯಲು ಯುನಿಕಾರ್ನ್ ಚಿಕಿತ್ಸಾ ವಿಧಾನದಿಂದ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್.ಸದಾನಂದ್ ತಿಳಿಸಿದರು.
ಈ ವಿಧಾನವನ್ನು ಕರ್ನಾಟಕದಲ್ಲೇ 4ನೇ ಹಾಗೂ ಜಯದೇವದಲ್ಲೇ ಪ್ರಥಮವಾಗಿ ಈ ಚಿಕಿತ್ಸೆ ನೀಡಿದ ಸಾಧನೆ ಮಾಡಿದ ಕೇಂದ್ರವಾಗಿದೆ ಎಂದು ಆಪತ್ರೆಯಲ್ಲಿ ತಿಳಿಸಿದರು.
ವೈದ್ಯ ಡಾ. ಹರ್ಷಬಸಪ್ಪ ಮಾತನಾಡಿ, ಮಳವಳ್ಳಿ ತಾಲೂಕಿನ ಗ್ರಾಮವೊಂದರ 73 ವರ್ಷದ ವೃದ್ಧನಿಗೆ ಮಹಾಪಧಮನಿಯ ಕವಾಟವು ಗಟ್ಟಿಯಾಗಿ ಕ್ಯಾಲ್ಸಿಯಂ ಸಂಗ್ರಹವಾಗಿದ್ದರಿಂದ ಕೃತಕ ಕವಾಟ ಅಳವಡಿಸಿದ ನಂತರ ಪ್ರೋಜನ್ ಲೀಫ್‌ಲೆಟ್ ತೊಂದರೆಯಾಗಿತ್ತು. ವೈದ್ಯರು ತಕ್ಷಣ ಕ್ಯಾಥೇಟರ್ ಮ್ಯಾನಿಪ್ಯುಲೇಷನ್ ಮೂಲಕ ಶಸ್ತ್ರಚಿಕಿತ್ಸೆ ನಡೆಸದೆಯೇ ಯಶಸ್ವಿಯಾಗಿ ಸಮಸ್ಯೆ ಪರಿಹರಿಸಿದರು ಎಂದರು.
ಒಂದೇ ದಿನದಲ್ಲಿ ಎರಡು ಅತ್ಯಂತ ಸಂಕೀರ್ಣ ಟಾವಿ ಚಿಕಿತ್ಸೆಯನ್ನು ಯಶಸ್ವಿ ಮಾಡಿದ್ದು, ಮೈಸೂರಿನಲ್ಲಿಯೇ ವಿಶ್ವಮಟ್ಟದ ಸ್ಟ್ರಕ್ಚರಲ್ ಹೃದಯ ಚಿಕಿತ್ಸೆಯನ್ನು ನೀಡುವ ಸಾಮರ್ಥ್ಯ ನಮ್ಮ ಜಯದೇವ ಆಸ್ಪತ್ರೆಗೆ ಇದೆ ಎನ್ನುವುದು ಸಾಬೀತಾಗಿದೆ ಎಂದರು.
ಆಸ್ಪತ್ರೆಯ ನಿರ್ದೇಶಕ ಡಾ.ಬಿ.ದಿನೇಶ್, ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ವೈದ್ಯರ ತಂಡದ ಸಹಕಾರದಿಂದ ಸಾಧ್ಯವಾಗಿದ್ದು, ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದರು.
ವೈದ್ಯರಾದ ಡಾ.ಶ್ರೀನಿಧಿ ಹೆಗ್ಗಡೆ, ಡಾ. ಶಶಿಕಾಂತ್, ಡಾ.ಬಿ.ಪಂಕಜ್, ಸಿಬ್ಬಂದಿ ಶಾಂತಕುಮಾರಿ, ಸತೀಶ್, ಭುವನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net