ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್ ಡಾ. ಬೋಗಾದಿ ಪ್ರಶಾಂತ್ ಅವರ ತಪಾಸಣೆ ನಡೆಸಿದಾಗ, ಮೊಣಕಾಲಿನ ಒಳಗಿನ ಭಾಗ ಮಾತ್ರ ಒಸ್ಟಿಯೊ ಆರ್ಥ್ರೈಟಿಸ್ (ಜಂಟಿಗಳ ಮಧ್ಯದ ಅಸ್ತಿರಜ್ಜಿನ ಸವೆತದಿಂದ ಉಂಟಾಗುವ ಮೊಣಕಾಲು ನೋವು) ಹಾನಿಗೊಳಗಾಗಿರುವುದು ಪತ್ತೆಯಾಯಿತು. ಹಾಗಾಗಿ ವೈದ್ಯರು, ಇಡೀ ಮೊಣಕಾಲನ್ನು ಬದಲಿಸುವ ಬದಲು, ಕೇವಲ ಹಾನಿಗೊಳಗಾದ ಭಾಗವನ್ನು ಮಾತ್ರ ಸರಿಪಡಿಸುವ 'ಪಾರ್ಶಿಯಲ್ ನೀ ರಿಪ್ಲೇಸ್‌ಮೆಂಟ್' ಮಾರ್ಗವನ್ನು ಆಯ್ದುಕೊಂಡರು.