ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಲಿ

ಬೆಟ್ಟದಪುರದ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜು ಪಿ.ಚಿಕ್ಕಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಬೆಟ್ಟದಪುರದ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಾಜು ಪಿ.ಚಿಕ್ಕಹಳ್ಳಿ ಅವರನ್ನು ಸನ್ಮಾನಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌
  • ಮೈಸೂರು ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ
  • ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ
ಬೆಟ್ಟದಪುರ: ಪ್ರಪಂಚದ ಎಲ್ಲ ಸಂಸ್ಕೃತಿಯ ತವರು ಭಾರತವೇ ಆಗಿದ್ದು, ಎಲ್ಲ ಧರ್ಮಗಳಿಗೆ ಅಡಿಪಾಯ ನಮ್ಮ ಧರ್ಮ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಮೈಸೂರು ತಾಲೂಕು ಅಧ್ಯಕ್ಷ ಶರಣ ದೇವರಾಜು ಪಿ.ಚಿಕ್ಕಹಳ್ಳಿ ಹೇಳಿದರು.
ಇಲ್ಲಿನ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಗುರುವಿನ ಸ್ಥಾನ ದೊಡ್ಡದು. ಗುರು ಸಂಸ್ಕಾರವನ್ನು ಕಲಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕಾದರೆ ಪಂಚ ಮತಗಳನ್ನು ತ್ಯಜಿಸಬೇಕು. ಗುರುವಿನ ಗುಲಾಮನಾಗುವ ತನಕ ಮುಕುತಿ ದೊರೆಯುವುದಿಲ್ಲವೋ, ಅಂತೆಯೇ ಎಲ್ಲರೂ ಗುರುಗಳು ಆಗಲು ಸಾಧ್ಯವಿಲ್ಲ ಎಂದರು.
ಸಂಸ್ಕಾರ ಎಂದರೆ ರಾತ್ರಿ ಅಭ್ಯಾಸ ಮಾಡಿದರೆ ಬರುವಂತಹದ್ದಲ್ಲ. ಅದು ಸ್ವತಃ ಹುಟ್ಟಿನಿಂದಲೇ ಬರಬೇಕು. ಇನ್ನು ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು ಮೊಬೈಲಿನಿಂದ ದೂರವಿದ್ದು, ಪುಸ್ತಕವನ್ನು ಓದುವಂತಾಗಬೇಕು ಎಂದು ತಿಳಿಸಿದರು.
ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಬಿ.ವಿ.ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರೀತಿ, ವಿಶ್ವಾಸ, ಮಮತೆ, ಶಾಶ್ವತವಾಗಿರಬೇಕು. ಸಾಧನೆಗೆ ವಯಸ್ಸಿನ ನಿಬಂಧನೆಗಳಿಲ್ಲ ಎಂದರು.
ಸಂಸ್ಥೆ ಕಾರ್ಯದರ್ಶಿ ಎ.ವಿ ಛಾಯಾ, ಪ್ರಾಂಶುಪಾಲ ರಾಜು, ಉಪನ್ಯಾಸಕರಾದ ನವೀನ್‌ಕುಮಾರ್, ರಾಮೇಗೌಡ ಕುಬೇರ್, ಶಿವಕುಮಾರ್, ವಸಂತ ವೆಂಕಟೇಶ್, ಕುಮಾರ್, ಯಶವಂತ್‌ಕುಮಾರ್, ಸತೀಶ್, ಮಂಜುನಾಥ್, ಬಸವರಾಜು, ಸುನಿಲ್, ಹರ್ಷಿತಾ, ರಶ್ಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net