ವಿದ್ಯಾರ್ಥಿಗಳಿಗೆ ಕೌಶಲ ಅಗತ್ಯ : ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ

ಮೈಸೂರಿನ ಮಹಾರಾಜ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಕೌಶಲ ಉಪನ್ಯಾಸ ಕಾರ್ಯಕ್ರಮವನ್ನು  ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ. ಸವಿತಾ ಉದ್ಘಾಟಿಸಿದರು. ಪ್ರೊ.ಎನ್. ನಾಗರಾಜ, ಪ್ರೊ.ಮಹೇಶ್, ಪ್ರೊ.ವಿ. ಷಣ್ಮುಗಂ ಇದ್ದರು.
ಮೈಸೂರಿನ ಮಹಾರಾಜ ಕಾಲೇಜು ವತಿಯಿಂದ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಕೌಶಲ ಉಪನ್ಯಾಸ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ. ಸವಿತಾ ಉದ್ಘಾಟಿಸಿದರು. ಪ್ರೊ.ಎನ್. ನಾಗರಾಜ, ಪ್ರೊ.ಮಹೇಶ್, ಪ್ರೊ.ವಿ. ಷಣ್ಮುಗಂ ಇದ್ದರು.
Published on
ಮೈಸೂರು: ಪದವಿ ಪೂರ್ಣಗೊಳಿಸಿದ ತಕ್ಷಣ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಕೌಶಲ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.
ಮಹಾರಾಜ ಕಾಲೇಜು ವತಿಯಿಂದ ಯುವರಾಜ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಕೌಶಲ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಕೇವಲ ಪದವಿ ಗಳಿಸಿದ ಮಾತ್ರಕ್ಕೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೃಷ್ಟಿಯಾಗುವ ಉದ್ಯೋಗ ಪಡೆಯಲು ಸಾಕಷ್ಟು ಪೈಪೋಟಿ ಇದ್ದು, ಈ ಪೈಪೋಟಿಗೆ ವಿದ್ಯಾರ್ಥಿಗಳು ತಯಾರಾಗಬೇಕು ಎಂದರು.
ಉದ್ಯೋಗ ಪಡೆಯುವ ವಿಚಾರದಲ್ಲಿ ಎದುರಾಗುವ ಸವಾಲನ್ನು ಅರ್ಥ ಮಾಡಿಕೊಳ್ಳದೆ ಹೋದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಪ್ರಸ್ತುತ ಸಣ್ಣದೊಂದು ಸರ್ಕಾರಿ ಉದ್ಯೋಗಕ್ಕೂ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಹಾಕುತ್ತಿದ್ದು, ಸ್ಪರ್ಧೆ ದೊಡ್ಡ ಮಟ್ಟದಲ್ಲಿ ಇದೆ. ಹಾಗಾಗಿ ಸ್ಪರ್ಧೆಗೆ ತಯಾರಿ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರು ಐಎಎಸ್, ಕೆಎಎಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಅದರೆ, ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಸಾಧನೆ ತೋರಲು ನಿರಂತರ ಪ್ರಯತ್ನ ನಡೆಸಬೇಕು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಸಮಯ ನೀಡಬೇಕು. ಸಮಯ ಹೊಂದಿಸಿಕೊಳ್ಳಲು ಕಲೆಯನ್ನು ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ರೀಲ್ಸ್ ನೋಡುವುದರಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಸಾಧನೆ ತೋರಲು ಮೊಬೈಲ್ಅನ್ನು ಪಕ್ಕಕ್ಕೆ ಇಟ್ಟು ಪುಸ್ತಕ ಓದುವ ಕಡೆಗೆ ಆಸಕ್ತಿ ತೋರಬೇಕು. ರೀಲ್ಸ್ ನೋಡುವ ಬದಲು ಆಸಕ್ತಿಯಿಂದ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊ ಳ್ಳಬೇಕು. ನಿಮ್ಮಲ್ಲಿ ಶಿಸ್ತು ಇಲ್ಲದೆ ಹೋದರೆ ಜೀವನದಲ್ಲಿ ಯಶಸ್ಸು ಸಾಧವಿಲ್ಲ. ಮೊಬೈಲ್ನಲ್ಲೂ ಸಾಕಷ್ಟು ಉಪಯುಕ್ತ ಮಾಹಿತಿ ಇದ್ದು, ಅದನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ರೂಸಾ ಸಂಯೋಜಕ ಪ್ರೊ.ಮಹೇಶ್, ಪ್ರಾಂಶುಪಾಲ ಪ್ರೊ.ವಿ. ಷಣ್ಮುಗಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net