10 ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕ್ರಮ

ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ರವಿಕುಮಾರ್ ಜೈನ್, ಪೃಥ್ವಿರಾಜ್ ಜೈನ್, ಸುರೇಶ್ ಇತರರು ಇದ್ದರು.
ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ರವಿಕುಮಾರ್ ಜೈನ್, ಪೃಥ್ವಿರಾಜ್ ಜೈನ್, ಸುರೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜೈನ್ ಮಾಹಿತಿ
  • ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
  • ಪ್ರಾಚೀನ ದೇವಾಲಯಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ ದೇಶಾದ್ಯಂತ ಸಂಸ್ಥೆಯ ಶಾಖೆಗಳನ್ನು ಸ್ಥಾಪಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅಭಿವೃದ್ಧಿ ಕೆಲಸವನ್ನು ಮಾಡಲಾಗುತ್ತಿದೆ
ಮೈಸೂರು: ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುತ್ತಿದ್ದು, 10 ದೇವಾಲಯಗಳನ್ನು ಗುರುತಿಸಲಾಗಿದೆ ಎಂದು ಅಖಿಲ ಭಾರತ ಪ್ರಾಚೀನ ದೇಗುಲಗಳ ಪುನರುಜ್ಜೀವನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜೈನ್ ಮಾಹಿತಿ ನೀಡಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಟ್ರಸ್ಟ್ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.
ಕೋಲಾರ ಜಿಲ್ಲೆಯ ಮುಳಬಾಗಿಲಿನ ವಿರೂಪಾಕ್ಷ, ಉಡುಪಿಯ ಭ್ರಮಲಿಂಗೇಶ್ವರ, ಪಾಂಡುರಂಗ, ಚಾಮರಾಜನಗರದ ಭುಜಂಗೇಶ್ವರ, ತಲಕಾಡಿನ ವೈಕುಂಠ ನಾರಾಯಣಸ್ವಾಮಿ, ಬಿಳಿಕೆರೆಯ ಲಕ್ಷ್ಮೀಕಾಂತ ದೇವಾಲಯ, ಮಂಡ್ಯದ ಮೇಲುಕೋಟೆ ತೊಣ್ಣೂರು ಕೆರೆಯಲ್ಲಿನ ವೆಂಕಟೇಶ್ವರ, ಹನೂರಿನ ಮಾರಮ್ಮ ಹಾಗೂ ಬೋಗಾದಿ ರಸ್ತೆಯ ಕುಮಾರಬೀಡು ಗ್ರಾಮದ ಜೈನ ದೇವಾಲಯ ಜೀರ್ಣೋದ್ಧಾರ ಮಾಡಲು ಪಟ್ಟಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಚೀನ ದೇವಾಲಯಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕೆ ದೇಶಾದ್ಯಂತ ಸಂಸ್ಥೆಯ ಶಾಖೆಗಳನ್ನು ಸ್ಥಾಪಿಸಲಾಗುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅಭಿವೃದ್ಧಿ ಕೆಲಸವನ್ನು ಮಾಡಲಾಗುತ್ತಿದೆ. 2022ರಲ್ಲಿ ಟ್ರಸ್ಟ್ ಸ್ಥಾಪನೆಯಾಗಿದ್ದು, ದೇಗುಲಗಳ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುತ್ತಿದೆ ಎಂದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಬಿಳಿಕೆರೆ ಹಾಗೂ ಕುಮಾರಬೀಡು ದೇಗುಲಗಳ ಜೀರ್ಣೋದ್ಧಾರಕ್ಕೆ ಸಲಹೆ ನೀಡಿದ್ದರು. ದಾನಿಗಳ ನೆರವಿನಿಂದಲೇ ಅಭಿವೃದ್ಧಿ ಮಾಡಲಾಗುವುದು ಎಂದರು.
1947ರಲ್ಲಿ ದೇಶದಲ್ಲಿ ಸಾವಿರಾರು ವರ್ಷ ಇತಿಹಾಸದ ದೇವಾಲಯವಿದ್ದವು. 17.5 ಲಕ್ಷದಷ್ಟಿದ್ದ ಹಿಂದು ದೇಗುಲಗಳು ನಿರ್ಲಕ್ಷ್ಯದಿಂದಾಗಿ 7 ಲಕ್ಷ ಮಾತ್ರ ಇವೆ. ದೇವಾಲಯಗಳ ಉಳಿವು ತುರ್ತಾಗಿದ್ದು, ಕಂಪನಿಗಳ ಸಿಎಸ್‌ಆರ್ ನಿಧಿ ಹಾಗೂ ದಾನಿಗಳ ನೆರವು ಪಡೆಯಲಾಗುತ್ತಿದೆ ಎಂದು ಹೇಳಿದರು.
ಟ್ರಸ್ಟ್ ಜಿಲ್ಲಾಧ್ಯಕ್ಷರಾಗಿ ಡಿ.ರಾಜೇಶ್, ಕಾರ್ಯದರ್ಶಿ ರಾಜು, ಉಪಾಧ್ಯಕ್ಷ ಅನಿಲ್ ಜೈನ್, ಖಜಾಂಚಿ ಚೈತನ್ಯ ಕುಮಾರ್, ಪದಾಧಿಕಾರಿಗಳಾದ ಮರಿಸ್ವಾಮಿ ನಾಯಕ್, ಮರಿಗೌಡ, ಬಾಲರಾಜ್, ಪುಟ್ಟರಾಜು, ಜಯಪ್ರಕಾಶ್, ಕೇಶವ, ಪ್ರಕಾಶ್, ದೇವರಾಜ್, ಮಂಜುನಾಥ್, ಕಾಂತರಾಜ್ ಪ್ರಮಾಣ ವಚನ ಸ್ವೀಕರಿಸಿದರು.
ಟ್ರಸ್ಟ್ ರಾಜ್ಯ ಅಧ್ಯಕ್ಷ ಪೃಥ್ವಿರಾಜ್ ಜೈನ್, ರಾಜ್ಯ ಖಜಾಂಚಿ ಸುರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net