ಫೈ. ಶ್ರೀಧರ್ ಮಾತನಾಡಿ, ಹುಬ್ಬಳ್ಳಿಯ ಪೈ.ಹುಣಕಲ್, ಫೈ.ಸದಾನಂದ ಹಾಗೂ ಹಾರೋಹಳ್ಳಿ ಪೈ.ಸುಜೇಂದ್ರ ನಡುವೆ ಮಾರ್ಫಿಟ್ ಕುಸ್ತಿ, ಮೈಸೂರಿನ ನಜರ್‌ಬಾದ್‌ನ ಪೈ.ಚೇತನ್‌ಗೌಡ ಹಾಗೂ ಹುಬ್ಬಳ್ಳಿಯ ಪೈ. ಹುಣಕಲ್ ಪೈ.ಧ್ರುವಕುಮಾರ್, ಹುಣಸೂರಿನ ಟೈಗರ್ ಸಿದ್ದಣ್ಣನವರ ಗರಡಿಯ ಪೈ.ಚೇತನ್ ಹಾಗೂ ಕ್ಯಾತಮಾರನಹಳ್ಳಿ ಪೈ.ಸಂಜಯ್ ನಡುವೆ ಸೇರಿದಂತೆ ಒಟ್ಟು 30 ಕುಸ್ತಿಗಳು ನಡೆಯಲಿದ್ದು, 5-8 ಹಾಗೂ 10-15 ನಿಮಿಷಗಳ ಕುಸ್ತಿ ನಡೆಯಲಿದೆ. ಕುಸ್ತಿಪಟುಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಗ್ಗಂದೂರು ಸಿದ್ದರಾಜು, ಕಾಂತರಾಜು ಇದ್ದರು.