ಮೈಸೂರಿನ ಕುವೆಂಪುನಗರದ ಅಕ್ಷಯ ಭಂಡಾರ್ ಸಮೀಪದ ಸನ್‌ರೈಸರ್ಸ್ ಸ್ಪೋರ್ಟ್ಸ್ ವೇರ್ ಅಂಗಡಿ ಮುಂದೆ ತ್ಯಾಜ್ಯ ಸುರಿದು, ಅಂಗಡಿ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಿರುವುದು ಇದೀಗ ಗಮನ ಸೆಳೆದಿದೆ. ರಿಂಗ್ ರಸ್ತೆಯ ಬದಿಯಲ್ಲಿ ಸುರಿದಿದ್ದ ಕಸದ ರಾಶಿಯಲ್ಲಿ ಸನ್‌ರೈಸರ್ಸ್ ಸ್ಪೋರ್ಟ್ಸ್ ವೇರ್ ಅಂಗಡಿಗೆ ಸಂಬಂಧಿಸಿದ ಚೀಟಿ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ ಸನ್‌ರೈಸರ್ಸ್ ಸ್ಪೋರ್ಟ್ಸ್ ವೇರ್ ಅಂಗಡಿಗೆ ಸೇರಿದ್ದೆಂದು ಖಚಿತಪಡಿಸಿಕೊಂಡ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಿಬ್ಬಂದಿ, ಕಸವನ್ನು ಸಂಗ್ರಹಿಸಿ ಮತ್ತೆ ಅಂಗಡಿ ಮುಂದೆಯೇ ತಂದು ಸುರಿಸಿದ್ದಾರೆ. ಬಳಿಕ ಅಂಗಡಿ ಮಾಲೀಕರಿಗೆ 5 ಸಾವಿರ ದಂಡ ವಿಧಿಸಿ, ಇನ್ನು ಮುಂದೆ ಈ ರೀತಿ ಕಸ ಸುರಿಸಿದರೆ ಹೆಚ್ಚಿನ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಕಸವನ್ನು ವಾಪಾಸ್ ತೆಗೆದುಕೊಂಡು ಹೋಗಿದ್ದಾರೆ.