ಶೃಂಗೇರಿ ಶಂಕರ ಮಠ ಶ್ರೇಷ್ಠ ಆಧ್ಯಾತ್ಮಿಕ ಶಕ್ತಿ ಕೇಂದ್ರ

ನಗರದ ಚಾಮುಂಡಿಪುರಂ ವೃತ್ತದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಶ್ರೀ ಭಾರತಿ ತೀರ್ಥಸ್ವಾಮೀಜಿ ಭಕ್ತವೃಂದದಿಂದ ಶ್ರೀ ಭಾರತಿತೀರ್ಥ ಸ್ವಾಮೀಜಿ ಅವರ 76ನೇ ವರ್ಧಂತಿ ಆಚರಿಸಲಾಯಿತು. ಎನ್.ಎಂ.ನವೀನ್‌ಕುಮಾರ್, ಶ್ರೀ ಇಳೈ ಆಳ್ವಾರ್ ಸ್ವಾಮಿ, ವಿಕ್ರಂ ಅಯ್ಯಂಗಾರ್, ಎಸ್.ಕೃಷ್ಣಮೂರ್ತಿ, ಎಂ.ಆರ್.ಬಾಲಕೃಷ್ಣ, ಅಪೂರ್ವ ಸುರೇಶ್, ಲಕ್ಷ್ಮೀದೇವಿ ಇದ್ದರು.
ನಗರದ ಚಾಮುಂಡಿಪುರಂ ವೃತ್ತದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಶ್ರೀ ಭಾರತಿ ತೀರ್ಥಸ್ವಾಮೀಜಿ ಭಕ್ತವೃಂದದಿಂದ ಶ್ರೀ ಭಾರತಿತೀರ್ಥ ಸ್ವಾಮೀಜಿ ಅವರ 76ನೇ ವರ್ಧಂತಿ ಆಚರಿಸಲಾಯಿತು. ಎನ್.ಎಂ.ನವೀನ್‌ಕುಮಾರ್, ಶ್ರೀ ಇಳೈ ಆಳ್ವಾರ್ ಸ್ವಾಮಿ, ವಿಕ್ರಂ ಅಯ್ಯಂಗಾರ್, ಎಸ್.ಕೃಷ್ಣಮೂರ್ತಿ, ಎಂ.ಆರ್.ಬಾಲಕೃಷ್ಣ, ಅಪೂರ್ವ ಸುರೇಶ್, ಲಕ್ಷ್ಮೀದೇವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾರ್ಯವನ್ನು ನಿತ್ಯ ನಿರಂತರವಾಗಿ ನೆರವೇರಿಸಿಕೊಂಡು ಬಂದಿದೆ
  • ಗುರು ಪರಂಪರೆಯನ್ನು ಸದಾಕಾಲ ಪ್ರಾರ್ಥಿಸಿ ಸ್ಮರಣೆಯ ಮೂಲಕ ಮಾನವ ಜನ್ಮದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು
ಮೈಸೂರು:ನಗರದ ಚಾಮುಂಡಿಪುರಂ ವೃತ್ತದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಾಗೂ ಶ್ರೀ ಭಾರತಿತೀರ್ಥ ಸ್ವಾಮೀಜಿ ಭಕ್ತವೃಂದದಿಂದ ಗಿಡ ನೆಟ್ಟಿ, ಸಿಹಿ ವಿತರಿಸುವ ಮೂಲಕ ಶೃಂಗೇರಿ ಶಾರದಾ ಪೀಠದ 36ನೇ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿಯ 76ನೇ ವರ್ಧಂತಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಖಿಲ ಭಾರತ ಬ್ರಾಹ್ಮಣ ಏಕೀಕೃತ ಪರಿಷತ್ ಅಧ್ಯಕ್ಷ ಎನ್.ಎಂ.ನವೀನ್‌ಕುಮಾರ್ ಮಾತನಾಡಿ, ಶೃಂಗೇರಿ ಶಂಕರ ಮಠವು ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ನಾಡಿನ ಶ್ರೇಷ್ಠ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದೆ. ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾರ್ಯವನ್ನು ನಿತ್ಯ ನಿರಂತರವಾಗಿ 1200ಕ್ಕೂ ಹೆಚ್ಚು ವರ್ಷಗಳಿಂದ ನೆರವೇರಿಸಿಕೊಂಡು ಬಂದಿದೆ ಎಂದರು.
ಶ್ರೀಭಾರತಿ ತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶೃಂಗೇರಿ ಇಂದು ವಿಶ್ವದ ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿದ್ದು ಕೋಟ್ಯಂತರ ಭಕ್ತರಿಗೆ ಸನ್ಮಾರ್ಗದಲ್ಲಿ ನಡೆಯಲು ಶಕ್ತಿ ನೀಡುತ್ತಿದೆ. ಗುರು ಪರಂಪರೆಯನ್ನು ಸದಾಕಾಲ ಪ್ರಾರ್ಥಿಸಿ ಸ್ಮರಣೆಯ ಮೂಲಕ ಮಾನವ ಜನ್ಮದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಮೇಲುಕೋಟೆ ವೆಂಗಿಪುರ ಮಠದ ಶ್ರೀಇಳೈ ಆಳ್ವಾರ್ ಸ್ವಾಮಿ, ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪಂಚಮುಖಿ ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಎಸ್.ಕೃಷ್ಣಮೂರ್ತಿ, ಮುಖಂಡರಾದ ಎಂ.ಆರ್. ಬಾಲಕೃಷ್ಣ, ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಕಡಕೊಳ ಜಗದೀಶ್, ಸಂದೇಪ್, ಜೀವಧಾರ ಗಿರೀಶ್, ಬಸವರಾಜು, ಜಯಸಿಂಹ, ಕೆ.ಎಂ.ನಿಶಾಂತ್, ಲಕ್ಷ್ಮೀದೇವಿ, ರೇಣುಕಾ ರಾಜ್, ವಿಜಯ್‌ಕುಮಾರ್, ಟಿ.ಎಸ್.ಅರುಣ್, ಸುಚೀಂದ್ರ, ಶಿವು ಪಟೇಲ್, ಮಹೇಶ್ ನಾಯಕ್, ಮನೋಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net