ಶ್ರೀ ವೀರಭದ್ರೇಶ್ವರ, ಬಸವೇಶ್ವರ ಜಾತ್ರೆ

ಹುಣಸೂರು ತಾಲೂಕಿನ ಮುಳ್ಳೂರಲ್ಲಿ ಶ್ರೀ ಬಸವೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಯ ಉತ್ಸವವು ವಿಜೃಂಭಣೆಯಿಂದ ಜರುಗಿತು.
ಹುಣಸೂರು ತಾಲೂಕಿನ ಮುಳ್ಳೂರಲ್ಲಿ ಶ್ರೀ ಬಸವೇಶ್ವರ ಹಾಗೂ ವೀರಭದ್ರೇಶ್ವರ ಸ್ವಾಮಿಯ ಉತ್ಸವವು ವಿಜೃಂಭಣೆಯಿಂದ ಜರುಗಿತು.
Published on
ಹುಣಸೂರು : ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಮತ್ತು ಬಸವೇಶ್ವರ ದೇವರ ಮೂರು ದಿನದ ಜಾತ್ರಾ ಮಹೋತ್ಸವವು ಓಕುಳಿ ಉತ್ಸವದೊಂದಿಗೆ ಶನಿವಾರ ಸಂಪನ್ನಗೊಂಡಿತು.
ಗಾವಡಗೆರೆ ಹೋಬಳಿಯ ಮುಳ್ಳೂರು ಮತ್ತು ಲಕ್ಕನಕೊಪ್ಪಲು ಗ್ರಾಮದ ಆರಾಧ್ಯದೇವತೆ ಶ್ರೀ ವೀರಭದ್ರೇಶ್ವರ ಮತ್ತು ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಅದ್ದೂರಿ ಉತ್ಸವ ನಡೆಸಲಾಯಿತು. ಗ್ರಾಮದಲ್ಲಿ ಓಕಳಿ ಹಬ್ಬ, ಅನ್ನಸಂತರ್ಪಣೆ ಮತ್ತು ಉತ್ಸವ ಈ ಮೂರು ಕಾರ್ಯಕ್ರಮಗಳು ಒಂದೊಂದು ದಿನ ಆಚರಿಸಲಾಯಿತು.
ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ಸವ ತೆರಳುವ ಮಾರ್ಗ ಸಂಪೂರ್ಣ ಹಸಿರು ತೋರಣ, ರಂಗೋಲಿ ಹೂವುಗಳಿಂದ ಸಿಂಗರಿಸಲಾಗಿತ್ತು. ಉತ್ಸವ ಸಾಗುವ ಮಾರ್ಗ ಮಧ್ಯೆ ಪಟಾಕಿ, ಬಾಣ ಬಿರುಸು ಗಮನ ಸೆಳೆಯಿತು.
400 ವರ್ಷ ಇತಿಹಾಸ ಹೊಂದಿರುವ ಚೋಳರಕಾಲದಲ್ಲಿ ಸ್ಥಾಪಿತಗೊಂಡ ದೇವಸ್ಥಾನದಲ್ಲಿ ನಿತ್ಯ ಸರ್ಪ ಕಾಣಿಸಿಕೊಳ್ಳುವ ಪ್ರತೀತಿ ಇದೆ. ಇಂದಿಗೂ ಭಕ್ತರು ಸರ್ಪ ವೀಕ್ಷಣೆಗೆ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಹರಕೆ ಅರ್ಪಿಸುವ ಪದ್ಧತಿ ನಡೆದಿದೆ ಎಂದು ಮುಖಂಡ ಸತ್ಯಪ್ಪ ಮಾಹಿತಿ ನೀಡಿದರು.
ವೀರಭದ್ರೇಶ್ವರ ಮತ್ತು ಬಸವೇಶ್ವರ ದೇವರ ಜಾತ್ರೆಯಲ್ಲಿ ಗ್ರಾಮದ ವೀರಶೈವ ಲಿಂಗಾಯತ, ಮರಾಠ, ಕುಂಬಾರ, ವಾಲ್ಮೀಕಿ, ಬ್ರಾಹ್ಮಣ, ಪರಿಶಿಷ್ಟ ಜಾತಿ ಸಮುದಾಯದವರು ಒಗ್ಗೂಡಿ ಆಚರಿಸುವ ಮೂಲಕ ಗ್ರಾಮದಲ್ಲಿ ಸಾಮರಸ್ಯ ಜಾತ್ರೆ ಎಂಬ ಹೆಗ್ಗಳಿಕೆ ಹೊಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net