ತಲಕಾಡಿನಲ್ಲಿ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದ ಹಳೇ ಬೀದಿಯಲ್ಲಿ ಸೋಮವಾರ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಭ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದ ಹಳೇ ಬೀದಿಯಲ್ಲಿ ಸೋಮವಾರ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಭ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on
ತಿ.ನರಸೀಪುರ: ತಾಲೂಕಿನ ತಲಕಾಡು ಪಟ್ಟಣದ ಹಳೇ ಬೀದಿಯಲ್ಲಿ ಸೋಮವಾರ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಪುರಾತನ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ಸಹಸ್ರಾರು ಭಕ್ತರು ಭಕ್ತಿಭಾವ, ಸಂಭ್ರಮದ ನಡುವೆ ರಥೋತ್ಸವ ನೆರವೇರಿತು. ರಥೋತ್ಸವದ ಅಂಗವಾಗಿ ಸೂರ್ಯೋದಯಕ್ಕೂ ಮುನ್ನ ದೇವಾಲಯದಲ್ಲಿ ಮೂಲ ವಿಗ್ರಹ ಹಾಗೂ ಉತ್ಸವಮೂರ್ತಿಗೆ ವಿವಿಧ ಅಭಿಷೇಕ ನೆರವೇರಿಸಿ, ಪುಷ್ಪಾಲಂಕಾರ ಮಾಡಲಾಗಿತ್ತು. ಸಾಂಪ್ರದಾಯಿಕ ಉತ್ಸವಗಳು ನಡೆದ ಬಳಿಕ ಶ್ರೀ ವೈದ್ಯನಾಥೇಶ್ವರ ಸ್ವಾಮಿ ವಿರಾಜಮಾನರಾಗಿದ್ದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೊದಲು ಶ್ರೀ ವಿಘ್ನೇಶ್ವರ, ಶ್ರೀ ಸುಬ್ರಹ್ಮಣ್ಯ ರಥಗಳು ಸಾಗಿದ ಬಳಿಕ ಸಾಗಿದ ಶ್ರೀ ಮನೋನ್ಮಣಿ ಸಮೇತ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಭ್ರಹ್ಮರಥೋತ್ಸವವು ದೇವಸ್ಥಾನದ ಬೀದಿಯಿಂದ ಪ್ರಾರಂಭವಾಗಿ ನೆಹರು ಸರ್ಕಲ್ ಹಾಗೂ ವಾಸ್ತು ಬೀದಿ ಮಾರ್ಗವಾಗಿ ಸಾಗಿ ಮತ್ತೆ ದೇವಾಲಯ ತಲುಪಿತು. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಮೂರ್ತಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಭಕ್ತರು ಉತ್ಸವಮೂರ್ತಿಗೆ ಹಣ್ಣು ಕಾಯಿ ಸಮರ್ಪಿಸಿ, ಹಣ್ಣು ದವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ದಾರಿಯುದ್ದಕ್ಕೂ ಭಕ್ತಾದಿಗಳು ನೀರು, ಮಜ್ಜಿಗೆ, ಪಾನಕ ಹಾಗೂ ಕೋಸಂಬರಿ ವಿತರಿಸಿದರು.
ಹಸ್ತಿಕೇರಿ ಮಠದ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ, ಪೂರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಅರ್ಚಕ ಆನಂದ್ ದೀಕ್ಷಿತ್, ಉಪ ತಹಸೀಲ್ದಾರ್ ಈ.ಕುಮಾರ್, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಪ್ರಸಾದ್, ಶಾನುಭೋಗ ರವಿಶಂಕರ್, ಮುಖಂಡರಾದ ಹೆಮ್ಮಿಗೆ ಸುರೇಶ್, ಶಾಂತರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net