ಕುವೆಂಪುನಗರದಲ್ಲಿ ಶ್ರೀ ಶಿವಕುಮಾರ ಸ್ವಾಮಿ ಜಯಂತ್ಯುತ್ಸವ ಆಚರಣೆ

 ಕುವೆಂಪುನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬುಧವಾರ ಶ್ರೀ ಶಿವಕುಮಾರ ಸ್ವಾಮಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ಷಡಕ್ಷರಿ ರಜಿನಿ, ಜಗದೀಶ್, ಗುರುಸ್ವಾಮಿ, ರವಿಕುಮಾರ್, ಕಿರಣ್ ಕುಮಾರ್, ಕಡಕೋಳ ಜಗದೀಶ್ ಹಾಗೂ ಇತರರು ಇದ್ದರು.
ಕುವೆಂಪುನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬುಧವಾರ ಶ್ರೀ ಶಿವಕುಮಾರ ಸ್ವಾಮಿ ಅವರ ಜಯಂತ್ಯುತ್ಸವ ಆಚರಿಸಲಾಯಿತು. ಷಡಕ್ಷರಿ ರಜಿನಿ, ಜಗದೀಶ್, ಗುರುಸ್ವಾಮಿ, ರವಿಕುಮಾರ್, ಕಿರಣ್ ಕುಮಾರ್, ಕಡಕೋಳ ಜಗದೀಶ್ ಹಾಗೂ ಇತರರು ಇದ್ದರು.
Published on
ಮೈಸೂರು: ಕುವೆಂಪುನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಜಗದಾಂಬ ಪೆಟ್ರೋಲ್ ಬಂಕ್ ಅಭಿಮಾನಿಗಳ ವತಿಯಿಂದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿ ಅವರ ಜಯಂತ್ಯುತ್ಸವ ಆಚರಿಸಲಾಯಿತು.
ಈ ಸಂದರ್ಭಮಾತನಾಡಿದ ಮುಖಂಡ ಷಡಕ್ಷರಿ ರಜಿನಿ, ಶಿವಕುಮಾರಸ್ವಾಮೀಜಿ ಸೂರ್ಯನಂತೆ ಎಲ್ಲರ ಮನೆ, ಮನಸ್ಸು ಬೆಳಗುವ ಮಹಾನ್ ಚೇತನ. ಶ್ರೀಗಳು ನಮ್ಮೊಂದಿಗೆ ಇಂದಿಗೂ ಇದ್ದಾರೆ, ಮುಂದೆಯೂ ಇರುತ್ತಾರೆ. ತ್ರಿವಿಧ ದಾಸೋಹಿಗಳಾದ ಡಾ.ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಈ ಸಂದರ್ಭ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಪ್ರಮುಖರಾದ ಗುರುಸ್ವಾಮಿ, ರವಿಕುಮಾರ್, ಕಿರಣ್ ಕುಮಾರ್, ಕಡಕೋಳ ಜಗದೀಶ್, ಹೇಮಂತ್ ಕುಮಾರ್, ಆನಂದ್, ಮಂಜು, ಶಿವಣ್ಣ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net