ಶ್ರೀ ಚಾಮುಂಡೇಶ್ವರಿ ತಾಯಿ ಜನ್ಮ ದಿನಾಚರಣೆ

ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯವರ ಜನ್ಮ ದಿನಾಚರಣೆ,  ಶ್ರೀ ಕನ್ನಂಬಾಡಮ್ಮ ದೇವಿಯ ಹಾಗೂ ಸುಂಕದ ಮಾರಮ್ಮ ದೇವಿಯ ಪೂಜಾ ಮಹೋತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯವರ ಜನ್ಮ ದಿನಾಚರಣೆ, ಶ್ರೀ ಕನ್ನಂಬಾಡಮ್ಮ ದೇವಿಯ ಹಾಗೂ ಸುಂಕದ ಮಾರಮ್ಮ ದೇವಿಯ ಪೂಜಾ ಮಹೋತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
Published on

ಕೆ.ಆರ್.ನಗರ :

ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಯವರ ಜನ್ಮ ದಿನಾಚರಣೆ, ಶ್ರೀ ಕನ್ನಂಬಾಡಮ್ಮ ದೇವಿಯ ಹಾಗೂ ಶ್ರೀ ಸುಂಕದ ಮಾರಮ್ಮ ದೇವಿಯ ಪೂಜಾ ಮಹೋತ್ಸವ ಅಬ್ಬಯ್ಯನಾಯ್ಡು ಯುವಕರ ಸಂಘ ಹಾಗೂ ಬಡಾವಣೆಯ ನಿವಾಸಿಗಳ ಸಮ್ಮುಖದಲ್ಲಿ ಮಂಗಳವಾರ ನಡೆಸಲಾಯಿತು.

ಪ್ರತಿ ವರ್ಷದಂತೆ ಆಷಾಢ ಮಾಸದ ಮೂರನೇ ಮಂಗಳವಾರ ಪೂಜಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು, ಬೆಳಗ್ಗೆ 10 ಗಂಟೆಗೆ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಪೂರ್ಣ ಕುಂಭ ಕಳಸದೊಂದಿಗೆ ಹೆಣ್ಣುಮಕ್ಕಳು ದೇವಿಯ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕೆ.ಎನ್.ಪ್ರಸನ್ನಕುಮಾರ್, ಪುರಸಭಾ ಮಾಜಿ ಸದಸ್ಯರಾದ ಕೆ.ಎಲ್.ಕುಮಾರ್, ಸಂತೋಷ್‌ಗೌಡ, ಮುಖಂಡರಾದ ನಾಗರಾಜನಾಯಕ, ನಾರಾಯಣ್, ಗಣಪತಿ ರವಿ, ಶಂಭೂ, ಬೋರನಾಯಕ, ಲೋಕೇಶ್, ಶ್ರೀನಿವಾಸ್, ನಾಗೇಶ್, ಬಡಾವಣೆಯ ವಿವಿಧ ಸಮಾಜದ ಯಜಮಾನರು, ಮಹಿಳಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net