ಭಕ್ತಾಧಿಗಳಿಗೆ ಅನ್ನದಾಸೋಹ: ರತ್ನಪುರಿಯ ಶ್ರೀ ಆಂಜನೇಯಸ್ವಾಮಿ ಮುಂಭಾಗ ಭಕ್ತಾದಿಗಳಿಗೆ ಪ್ರತಿ ವರ್ಷದಂತೆ ರೈಸ್ ಮಿಲ್ ಕರುಣಾ, ಬಾರ್ ಹರೀಶ್, ಉದ್ಯಮಿ ಕೃಷ್ಣ,, ನಾಗೇಂದ್ರ, ಪ್ರಸನ್ನ, ತಂಡ ಈ ವರ್ಷವೂ ಕೂಡ ಅನ್ನದಾಸೋಹ ಏರ್ಪಡಿಸಿದ್ದರು. ಸಾವಿರಾರು ಭಕ್ತಾದಿಗಳು ಆಂಜನೇಯಸ್ವಾಮಿ ಪ್ರಸಾದ ಸ್ವೀಕರಿಸಿದ್ದರು. ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಕೆ.ಎಂ.ಎಫ್ ನಿರ್ದೇಶಕ ಕೆ.ಎಸ್.ಕುಮಾರ್ ಚಾಲನೆ ನೀಡಿದರು. ಆಂಜನೇಯಸ್ವಾಮಿ ಜಾತ್ರೆ ಕಮಿಟಿ ಅಧ್ಯಕ್ಷ ಪ್ರಭಾಕರ್, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ರತ್ನಪುರಿ ಪ್ರಸನ್ನ, ಜಿ.ಪಂ.ಮಾ.ಸದಸ್ಯ ಸುರೇಂದ್ರ, ಸತೀಶ್ ಪಾಪಣ, ಗಣ್ಯರು ಇದ್ದರು, ರಾಜ್ಯ ವ್ಯಾಪ್ತಿಯ 18 ಕ್ಕೂ ಹೆಚ್ಚು ತಂಡ ಭಾಗವಹಿಸಿವೆ.