ಎಸ್.ಆರ್. ಪುಟ್ಟಣ್ಣ ಕಣಗಾಲ್ ಜನ್ಮ ದಿನೋತ್ಸವ

 ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಆರ್.ರಘುಕೌಟಿಲ್ಯ, ಕೆ.ರಘುರಾಂ ವಾಜಪೇಯಿ, ಎಂ.ಡಿ.ಪಾರ್ಥಸಾರಥಿ, ನಜರ್‌ಬಾದ್ ನಟರಾಜ್, ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್ ಇತರರು ಇದ್ದರು.
ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗದಿಂದ ನಗರದಲ್ಲಿ ಆಯೋಜಿಸಿದ್ದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಆರ್.ರಘುಕೌಟಿಲ್ಯ, ಕೆ.ರಘುರಾಂ ವಾಜಪೇಯಿ, ಎಂ.ಡಿ.ಪಾರ್ಥಸಾರಥಿ, ನಜರ್‌ಬಾದ್ ನಟರಾಜ್, ವಿಕ್ರಂ ಅಯ್ಯಂಗಾರ್, ಕಡಕೊಳ ಜಗದೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗದಿಂದ ನೆನಪಿನ ಕಾರ್ಯಕ್ರಮ
  • ಮೈಸೂರಿನಲ್ಲಿ ನಿರ್ಮಾಣವಾಗುವ ಚಿತ್ರನಗರಿಗೆ ಪುಟ್ಟಣ್ಣ ಕಣಗಾಲ್ ಹೆಸರಿಡಬೇಕು
  • ಕಣಗಾಲದಲ್ಲಿರುವ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕಿದೆ
ಮೈಸೂರು: ಚಿತ್ರ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರ ಜನ್ಮದಿನೋತ್ಸವ ಅಂಗವಾಗಿ ಕರುಣಾಮಯಿ ವಿಷ್ಣು ಅಭಿಮಾನಿಗಳ ಬಳಗದಿಂದ ನೆನಪಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ಆರ್. ರಘು ಕೌಟಿಲ್ಯ, ಪೌರಾಣಿಕ ನಾಟಕಗಳು ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ, ಜನಮನ್ನಣೆಯಿದ್ದ ಕಾಲಘಟ್ಟದಲ್ಲಿ ಕೌಟುಂಬಿಕ ಚಿತ್ರಗಳು ಮತ್ತು ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ಸರಿಸಾಟಿಯಾಗಿ ನಿರ್ದೇಶಿಸಿ ಪುಟ್ಟಣ್ಣ ಯಶಸ್ವಿಯಾದರು ಎಂದರು.
ಅವರ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರಗಳು ಇಂದಿಗೂ ಜನಮಾನಸದಲ್ಲಿ ಅಚ್ಚಹಸುರಾಗಿವೆ. ಅವರು ಸೃಷ್ಟಿಸಿದ ಪಾತ್ರಗಳನ್ನು ಮರೆತಿಲ್ಲ. ಯುವಪೀಳಿಗೆಯಲ್ಲಿ ದೇಶಪ್ರೇಮ, ನಾಡಪ್ರೇಮವನ್ನು ತುಂಬುವುದಲ್ಲದೆ ಯಾವುದಾದರೂ ಒಂದು ಸಂದೇಶ ಇದ್ದೇ ಇರುತ್ತಿತ್ತು. ಅಲ್ಲದೆ ಚಿತ್ರದುರ್ಗದ ಕಲ್ಲಿನ ಕೋಟೆ, ಕನ್ಯಾಕುಮಾರಿ ವಿವೇಕ ಸ್ಮಾರಕ, ಕೊಡಗಿನ ಕಾವೇರಿ, ಚಾಮುಂಡೇಶ್ವರಿ ಸೇರಿದಂತೆ ನಾಡಿನ ಪ್ರೇಕ್ಷಣೀಯ ಸ್ಥಳಗಳನ್ನು ಸೊಗಸಾಗಿ ಚಿತ್ರೀಕರಿಸುತ್ತಿದ್ದರು ಎಂದು ಹೇಳಿದರು. 
ಪಿರಿಯಾಪಟ್ಟಣದ ಕಣಗಾಲ್ನಲ್ಲಿರುವ ಅವರ ಮನೆಯನ್ನು ಸ್ಮಾರಕವಾಗಿ ಉಳಿಸಿಕೊಳ್ಳಬೇಕಿದೆ. ಮೈಸೂರಿನಲ್ಲಿ ನಿರ್ಮಾಣವಾಗುವ ಚಿತ್ರನಗರಿಗೆ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಿರಿಯ ಸಮಾಜಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಕಲಾವಿದರ ತವರೂರು ಮೈಸೂರು ಚಿತ್ರರಂಗ ಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ಪಾತ್ರ ಪ್ರಮುಖವಾದದ್ದು. ಪುಟ್ಟಣ್ಣ ಅವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದಲ್ಲೇ ನಟಿಸುತ್ತಿದ್ದರು. ಇದರಿಂದ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಇತರರು ಅತ್ಯುತ್ತಮ ನಟರಾಗಿ ಹೊಮ್ಮಿದರು ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಪಡುವಾರಹಳ್ಳಿ ಎಂ.ರಾಮಕೃಷ್ಣ, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್.ಎನ್.ರಾಜೇಶ್, ಸಂಘಟಕರಾದ ವಿನಯ್ ಕಣಗಾಲ್, ಗಿರೀಶ್, ರಂಗನಾಥ್, ಧರ್ಮೇಂದ್ರ, ಸುಚೀಂದ್ರ, ನಾಗೇಂದ್ರ ಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net