ಕ್ರೀಡೆಗಳಿಂದ ಸಹಕಾರ, ನಾಯಕತ್ವ ಗುಣ ವೃದ್ಧಿ

 ಓವೆಲ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ  ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ನಿರತವಾಗಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು.
ಓವೆಲ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಓಟದ ಸ್ಪರ್ಧೆಯಲ್ಲಿ ನಿರತವಾಗಿರುವ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡೆಗಳಿಂದ ದೇಹ ಸದೃಢ, ಮನಸ್ಸು ಶಾಂತ
  • ಮೈವಿವಿ ಕುಲಸಚಿವೆ ಎಂ.ಕೆ.ಸವಿತಾ ಅಭಿಪ್ರಾಯ
  • ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟ
ಮೈಸೂರು: ಕ್ರೀಡೆಗಳು ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತವೆ. ಅದು ದೇಹವನ್ನು ಸದೃಢಗೊಳಿಸುವುದಲ್ಲದೆ, ಮನಸ್ಸನ್ನು ಸಹ ಶಾಂತವಾಗಿಡಲು ಸಹಾಯ ಮಾಡುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ನಗರದ ಮೈವಿವಿ ಓವಲ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಷಿಕ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. 
ಏನೇ ಆದರೂ ಸೋಲನ್ನು ಒಪ್ಪಿಕೊಳ್ಳುವ ಮನೋಭಾವ, ಜಯವನ್ನು ಸಾಧಿಸಿದಾಗ ಅತಿಶಯೋಕ್ತಿಯಿಲ್ಲದೆ ಆನಂದಿಸುವುದು ಉತ್ತಮ. ಸಹಕಾರ ಮತ್ತು ನಾಯಕತ್ವದ ಗುಣವನ್ನು ಕ್ರೀಡೆ ಬೆಳೆಸುತ್ತದೆ. ಹೀಗಾಗಿ, ಕ್ರೀಡೆಗಳಲ್ಲಿ ಭಾಗವಹಿಸಿ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದರು
ನಿವೃತ್ತ ಅಥ್ಲೆಟಿಕ್ ತರಬೇತಿದಾರ ಜಿ.ಆರ್.ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬರಿಗೂ ಯಾವುದೇ ಇಲಾಖೆಯಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ದೈಹಿಕ ಸಾಮರ್ಥ್ಯ ಮುಖ್ಯ. ಹೀಗಾಗಿ ದಿನಕ್ಕೆ ಅರ್ಧ ಗಂಟೆಯಾದರೂ ಒಂದಲ್ಲ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಶುಪಾಲ ಪ್ರೊ.ಎಂ.ಅಬ್ದುಲ್ ರಹಿಮಾನ್, ದೈಹಿಕ ಶಿಕ್ಷಣ ನಿರ್ದೇಶಕಿ ಕೆ.ಆರ್.ಪ್ರತಿಮಾ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಡಾ.ವಿ.ನಂದಕುಮಾರ್, ಪತ್ರಾಂಕಿತ ವ್ಯವಸ್ಥಾಪಕಿ ಆರ್.ಮೀನಾಕ್ಷಿ, ಸಹಾಯಕ ಪ್ರಾಧ್ಯಾಪಕಿ ಚಂದ್ರಕಲಾ ಪ್ರಾಧ್ಯಾಪಕ ಡಾ.ಡಿ.ಕೆ.ರವಿಶಂಕರ್ ಪಾಲ್ಗೊಂಡಿದ್ದರು.

ಫಲಿತಾಂಶ:

100 ಮೀಟರ್ ಓಟದಲ್ಲಿ ಬಿಂದು ಪ್ರಥಮ, ಜರೀನಾ ಜೇ ದ್ವಿತೀಯ, ಸಿಂಚನಾ ತೃತೀಯ, 200 ಮೀ. ಕೆ.ಲಕ್ಷ್ಮೀ ಪ್ರಥಮ, ಎಚ್.ಕೆ.ರಕ್ಷಿತಾ ದ್ವಿತೀಯ, ಎಚ್.ಕೆ. ಪ್ರಕೃತಿ ತೃತೀಯ ಸ್ಥಾನ ಗಳಿಸಿದರು.
400ಮೀ. ಓಟದಲ್ಲಿ  ಭುವನಾ, ಐಶ್ವರ್ಯ, ನಯನಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ, 800 ಮೀ. ಓಟದಲ್ಲಿ ಕೆ.ಎಸ್.ಲಕ್ಷ್ಮೀ, ಎಸ್.ಪಿ.ಸಹನಾ, ಸಿ.ಎನ್.ಪೊನ್ನಮ್ಮ  ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ್ದಾರೆ. 4*100 ಓಟದಲ್ಲಿ ಕೆ.ಎಸ್. ಲಕ್ಷ್ಮೀ, ಎಚ್.ವಿ.ತೇಜಸ್ವಿನಿ, ಅಫ್ರೀನಾ  ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.
ಜಾವಲಿನ್ ಎಸೆತದಲ್ಲಿ ಶಮಿತಾ, ಜೆ.ಜರೀನಾ, ಎಚ್.ಕೆ.ರಕ್ಷಿತಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಗುಂಡು ಎಸೆತದಲ್ಲಿ ಡಿ.ರಮ್ಯಾ, ಸಿ.ಎನ್.ಪೊನ್ನಮ್ಮ, ಜಿ.ಮಾಧುರಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು. ತಟ್ಟೆ ಎಸೆತದಲ್ಲಿ ಎಂ.ಎಸ್‌ಸಿಂಚನಾ, ಡಿ.ರಮ್ಯಾ, ಸಾಕ್ಷಿ  ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು.

ಅಧ್ಯಾಪಕರ ಸ್ಪರ್ಧೆಗಳ ಫಲಿತಾಂಶ

100 ಮೀ. ಓಟದಲ್ಲಿ  ಡಾ.ಡಿ.ಕೆ.ರವಿಶಂಕರ್, ಡಾ.ಪರಶಿವಮೂರ್ತಿ, ಡಾ.ಶ್ರೀನಿವಾಸ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಪ್ರದೀಪ್ ಕುಮಾರ್, ಶಶಿಕುಮಾರ್.ಎಸ್,ಡಾ.ಕೆ.ಎಸ್ ರಘುನಂದನ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. 100 ಮೀ. ಓಟದಲ್ಲಿ ಡಿ.ಗೀತಾ, ಡಾ.ಎಂ.ವೀಣಾ, ಕೆ.ಆರ್.ಕವಿತಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು.
ಪುರುಷರ ಗುಂಡು ಎಸೆತದಲ್ಲಿ ಪಿ.ಸೋಮಶೇಖರ್, ಟಿ.ವಿ.ಲೋಕೇಶ್, ಪ್ರದೀಪ್ ಕುಮಾರ್ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಡಿ.ಗೀತಾ, ಜಿ.ಶಾಮಲಾ, ಕೆ.ವಿದ್ಯಾ  ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಡಿ.ಗೀತಾ, ಕಾವೇರಿ, ಜಿ.ಶ್ಯಾಮಲಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net