ಮಹಾರಾಣಿ ಮಹಿಳಾ ಕಲಾ ಕಾಲೇಜಿನಿಂದ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಸೀಮಾ ಲಾಟ್ಕರ್ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಪ್ರೊ.ಎಂ.ಎಸ್.ಅನಿತಾ, ಡಾ.ಸಿ.ಎಸ್.ಮೋಹನ್‌ಕುಮಾರ್, ಕೆ.ವೆಂಕಟೇಶ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜೀವನದಲ್ಲಿ ಶಿಸ್ತನ್ನು ಬೆಳಸುವಲ್ಲಿ ಮತ್ತು ಸಕ್ರಿಯವಾಗಿರಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತವೆ
ಸಮಯ ವ್ಯರ್ಥಮಾಡದೆ ಸಮಯವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು
ಮೈಸೂರು:ಬಲವಾದ ವ್ಯಕ್ತಿತ್ವ ಮತ್ತು ವೃತ್ತಿಜೀವನ ರೂಪಿಸಲು ಕ್ರೀಡೆಗಳು ಸಹಾಯ ಮಾಡುತ್ತವೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಹೇಳಿದರು.
ಮಹಾರಾಣಿ ಮಹಿಳಾ ಕಲಾ ಕಾಲೇಜು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಿಂದ ನಗರದ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಆಯೋಜಿಸಿದ್ದ ಪ್ರಿನ್ಸೆಸ್ ಅಥ್ಲೆಟಿಕ್ಸ್ ಕ್ರೀಡಾಕೂಟ(ಕಾಲೇಜು ಅಂತರ್ಗತ ಪಂದ್ಯಾವಳಿ) ಉದ್ಘಾಟಿಸಿ ಮಾತನಾಡಿದರು.
ಶಿಸ್ತು ಜೀವನದಲ್ಲಿ ಬಹಳ ಮುಖ್ಯ. ಇದನ್ನು ಅಳವಡಿಸಿಕೊಂಡು ಪ್ರತಿ ದಿನವೂ ಉತ್ತಮ ವ್ಯಕ್ತಿತ್ವವನ್ನು ವೃದ್ಧಿಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತನ್ನು ಬೆಳಸುವಲ್ಲಿ ಮತ್ತು ಸಕ್ರಿಯವಾಗಿರಲು ಕ್ರೀಡೆ ಪ್ರಮುಖ ಪಾತ್ರವಹಿಸುತ್ತವೆ ಎಂದರು.
ಕ್ರೀಡೆಯ ಸೋಲು, ಗೆಲುವು ಜೀವನಕ್ಕೆ ಪಾಠವಿದ್ದಂತೆ. ಸೋಲಾದರೂ ಗೆಲುವುವಾದರೂ ಉತ್ತಮ ಮಾರ್ಗದಲ್ಲಿ ಸಾಗುವುದನ್ನು ಕಲಿಯಬೇಕು. ನಗರ ಪ್ರದೇಶ, ಗ್ರಾಮೀಣ ಪ್ರದೇಶ ಎನ್ನುವ ಹಿಂಜರಿಕೆ ಇಲ್ಲದೆ ಮುಂದೆ ಹೆಜ್ಜೆ ಇಡಬೇಕು. ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ವ್ಯರ್ಥಮಾಡದೆ ಸಮಯವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಮಾದಕ ವಸ್ತುಗಳ ಕುರಿತು ಎಚ್ಚರ ವಹಿಸಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಪ್ರೊ.ಎಂ.ಎಸ್.ಅನಿತಾ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್.ಮೋಹನ್‌ಕುಮಾರ್, ವ್ಯವಸ್ಥಾಪಕ ಕೆ.ವೆಂಕಟೇಶ್ ಇತರರು ಇದ್ದರು.