ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಎಂ.ಎಸ್.ನಾಗಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ.ಎಚ್.ವಿ. ಉದಯಕುಮಾರ್, ಕಿಶೋರ್, ಡಾ. ಪುಟ್ಟಸ್ವಾಮಿ ಹಾಗೂ ಕ್ರೀಡಾ ಸಮಿತಿ ಸದಸ್ಯ ದೇವರಾಜೇಗೌಡ ಮಂಜುನಾಥ್, ಡಾ.ರೇಷ್ಮಾ ಚೆಂಗಪ್ಪ, ರಾಮಮೂರ್ತಿ ಇತರರು ಇದ್ದರು.
ತಿ.ನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಎಂ.ಎಸ್.ನಾಗಣ್ಣ ಅವರನ್ನು ಸನ್ಮಾನಿಸಲಾಯಿತು. ಡಾ.ಎಚ್.ವಿ. ಉದಯಕುಮಾರ್, ಕಿಶೋರ್, ಡಾ. ಪುಟ್ಟಸ್ವಾಮಿ ಹಾಗೂ ಕ್ರೀಡಾ ಸಮಿತಿ ಸದಸ್ಯ ದೇವರಾಜೇಗೌಡ ಮಂಜುನಾಥ್, ಡಾ.ರೇಷ್ಮಾ ಚೆಂಗಪ್ಪ, ರಾಮಮೂರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಬಿನಿ ವಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಎಂ.ಎಸ್. ನಾಗಣ್ಣ ಅಭಿಮತ

ತಿ.ನರಸೀಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜತೆಗೆ ದೈಹಿಕ, ಮಾನಸಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ಕ್ರೀಡೆ ಮತ್ತು ಎನ್‌ಸಿಸಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಬಿನಿ ವಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಎಂ.ಎಸ್. ನಾಗಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಬಿನಿ ವಲಯ ಕ್ರೀಡಾ ಪ್ರತಿನಿಧಿಗಳ ಸಭೆ ಹಾಗೂ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಎನ್‌ಸಿಸಿ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯು ದೈಹಿಕ ಸಾಮರ್ಥ್ಯದೊಂದಿಗೆ ಸಮಯಪಾಲನೆ, ಶಿಸ್ತು, ತಂಡದ ಮನೋಭಾವ, ನಾಯಕತ್ವ ಹಾಗೂ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಕ್ರೀಡೆ ಬೆಳೆಸುತ್ತದೆ ಎಂದರು.
16 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ತರಬೇತುದಾರ ಬಿ.ಪಿ. ಕಿಶೋರ್ ಮಾತನಾಡಿ, ಎನ್‌ಸಿಸಿಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ, ಕರ್ತವ್ಯ ಪ್ರಜ್ಞೆ ಹಾಗೂ ದೇಶಸೇವಾ ಮನೋಭಾವ ಬೆಳೆಸುವ ಮಹತ್ವದ ವೇದಿಕೆಯಾಗಿದೆ ಎಂದರು.
2026-27ನೇ ಸಾಲಿನಲ್ಲಿ ಕಬಿನಿ ವಲಯದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಟೇಬಲ್ ಟೆನಿಸ್, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕುರಿತು ರೂಪುರೇಷೆ ಸಿದ್ಧಪಡಿಸಲಾಯಿತು.
ಗ್ರಂಥಪಾಲಕ ಹಾಗೂ ಕ್ರೀಡಾ ಸಮಿತಿ ಸದಸ್ಯ ಡಾ. ಪುಟ್ಟಸ್ವಾಮಿ ಹಾಗೂ ಕ್ರೀಡಾ ಸಮಿತಿ ಸದಸ್ಯ ಜಿ.ಎಸ್. ದೇವರಾಜೇಗೌಡ ಮಾತನಾಡಿದರು. ಹವಾಲ್ದಾರ್ ಡಿ.ಪಿ.ಮಂಜುನಾಥ್, ಕ್ರೀಡಾ ಸಮಿತಿ ಸದಸ್ಯರಾದ ಡಾ.ರೇಷ್ಮಾ ಚೆಂಗಪ್ಪ, ಬಿ.ಎಂ.ರಾಮಮೂರ್ತಿ, ಎಂ.ರಾಜಣ್ಣ , ಇಮ್ರಾನ್ ಪಾಷ, ಡಾ. ಆರ್. ಕೆಂಪರಾಜು , ಡಾ. ಪುಟ್ಟಸ್ವಾಮಿ, ರಾಘವೇಂದ್ರ ಎನ್.ಪ್ರಸಾದ್, ಎನ್. ಶಿವಪ್ರಸಾದ್, ಕ್ರೀಡಾ ಸಂಚಾಲಕ ಎಸ್. ಅನಂತಪದ್ಮನಾಭನ್, ಐಕ್ಯೂಎಸಿ ಸಂಯೋಜಕ ಡಾ. ಅಮಿತ್ ಸೇರಿದಂತೆ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net