ಕ್ರೀಡೆ -ಶಿಕ್ಷಣ ಒಂದೇ ನಾಣ್ಯದ ಎರಡು ಮುಖ

ನಗರದ ತಾಲೂಕು ಕ್ರೀಡಾಂಗಣದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜನೆ ಮಾಡಲಾಗಿದ್ದ 2 ದಿನಗಳ ಕಾಲ ನಡೆಯಲಿರುವ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜನೆ ಮಾಡಲಾಗಿದ್ದ 2 ದಿನಗಳ ಕಾಲ ನಡೆಯಲಿರುವ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಸ್ವಾಮಿ ದೇವರಾಜ ಸಲಹೆ
ನಂಜನಗೂಡು : ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಹಾಗೂ ಶಿಕ್ಷಣ ಒಂದೇ ನಾಣ್ಯದ 2 ಮುಖವಿದಂತೆ. ವಿದ್ಯಾರ್ಥಿಗಳು ಶಿಕ್ಷಣ ಜತೆ ಕ್ರೀಡಾಕೂಟದಲ್ಲೂ ಭಾಗವಹಿಸಬೇಕು. ಇದರಿಂದ ಕ್ರೀಡಾ ಸ್ಫೂರ್ತಿ ಜತೆಗೆ ಮಾನಸಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ ಎಂದು ನಂಜನಗೂಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ಗುರುಸ್ವಾಮಿ ದೇವರಾಜ ಸ್ವಾಮಿಗಳು ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ 2 ದಿನದ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ್ಯದಿಂದಲೇ ಮಕ್ಕಳು ಕ್ರೀಡೆ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿದರೆ ಮನಸ್ಸು ಹಾಗೂ ದೇಹ ಹಿಡಿದಿಟ್ಟುಕೊಳ್ಳಬಹುದು. ಕಲಿಕೆಯಲ್ಲಿ ಮನಸ್ಸು, ಕ್ರೀಡೆಯಲ್ಲಿ ದೇಹ ಸದಾಕಾಲವೂ ನಿಮ್ಮ ಜತೆಯಲ್ಲೇ ಇರಲಿದೆ ಎಂದರು.
ಕ್ರೀಡಾಕೂಟದಲ್ಲಿ ಸುಮಾರು 27 ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳು ಭಾಗವಹಿಸಿದವು. ಖೋ ಖೋ, ಕಬಡ್ಡಿ, ವಾಲಿಬಾಲ್, ಬ್ಯಾಡ್ಮಿಂಟನ್, 100 ಮೀಟರ್, 200 ಮೀಟರ್, 500 ಮೀಟರ್, ರಿಲೇ, ಉದ್ದ ಜಿಗಿತ, ಎತ್ತರ ಜಿಗಿತ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಲಯನ್ಸ್ ಶಿಕ್ಷಣ ಸಂಸ್ಥೆ ಮುಖ್ಯ ಸಲಹೆಗಾರ ಲಯನ್ಸ್ ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಮಹೇಶ್ ಕಾರ್ಯದರ್ಶಿ ಉಮೇಶ್ ಖಜಾಂಚಿ ಬಸವಣ್ಣ, ಲಯನ್ಸ್ ಶಾಲೆಯ ಅಧ್ಯಕ್ಷ ಮಹೇಶ್, ನಂಜುಂಡಸ್ವಾಮಿ, ಜಿ.ಮಹೇಶ್ ಶಿವನಂಜೇಗೌಡ, ಎಂ.ಎಚ್.ಮಹೇಶ್, ಸುನಿತಾ, ಗೀತಾಂಜಲಿ, ಶಾರದಾ, ನಾಗಾರಾಜು, ಶಿವಣ್ಣ, ಕೇಶವರಾವ್, ಜ್ಯೋತಿ ಕುಮಾರ್, ಬಾಲರಾಜ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net