ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಅರ್ಕನಾಥ ವಲಯಮಟ್ಟದ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನಗಳಿಸಿದ ವಿದ್ಯಾರ್ಥಿಗೆ ಬಿಇಒ ಕೃಷ್ಣಪ್ಪ ಬಹುಮಾನ ವಿತರಿಸಿದರು. ಕಂಚಿನಕೆರೆ ಕೆ.ಪಿ.ಪ್ರಸನ್ನ, ಸ್ವಾಮೇಗೌಡ, ದಾಸಪ್ಪ, ಎಚ್.ಎ.ಮಹದೇವಯ್ಯ, ದೇವು ಇದ್ದರು.
ಕೆ.ಆರ್.ನಗರ : ಪಾಲಕರು ಮತ್ತು ಶಿಕ್ಷಣ ಸಂಸ್ಥೆಯ ಪ್ರಮುಖರು ಶಾಲಾ ಪರೀಕ್ಷೆ ಅಂಕಗಳ ಮೇಲೆಯೇ ಗಮನ ಕೇಂದ್ರೀಕರಿಸಿರುವುದರಿಂದ ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕೃಷ್ಣ ರಾಜೇಂದ್ರ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 2026-27ನೇ ಸಾಲಿನ ಅರ್ಕನಾಥ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚಾಗುತ್ತಿದೆ. ಆಟಗಳು ಎಂದರೆ ಕೇವಲ ಆನ್‌ಲೈನ್ ಗೇಮ್ಸ್‌ಗೇ ಸೀಮಿತವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ಓದಬೇಕು ಎಂದು ಒತ್ತಡ ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇದರ ಜತೆಗೆ ಮಕ್ಕಳ ದೈಹಿಕ ಸದೃಢತೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರೀಡೆಗೆ ಮಹತ್ವ ನೀಡಬೇಕು. ಕ್ರೀಡಾಂಗಣಕ್ಕೆ ಅವರನ್ನು ನಿತ್ಯವೂ ಕರೆತರುವ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಗಳಲ್ಲಿ ಕ್ರೀಡೆಗೆ ಒತ್ತು ನೀಡಬೇಕು. ಕಾಗಿದೆ. ಸಮಾಜವನ್ನು ಕಟ್ಟುವ
ನಾಳಿನ ಪ್ರಜೆಗಳು ಸದೃಢರಾಗಿರಬೇಕು. ಮಕ್ಕಳಿಗೆ ಸೂಕ್ತ ತಿಳಿವಳಿಕೆ ನೀಡಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಉತ್ಸಾಹ ತುಂಬಬೇಕು ಎಂದರು. ಕ್ರೀಡಾ ಕೂಟದಲ್ಲಿ ವಿಜೇತರಾದವರು ನಿರಂತರವಾಗಿ ಗೆಲುವನ್ನು ಕಾಯ್ದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಸೋತವರು ನಿರಾಸೆಯಾಗದೇ ಮುಂಬರಲಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ಬಹುಮಾನ ವಿತರಣೆ:
ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಕ್ರೀಡಾ
ಸಮವಸ್ತ್ರ ಕೊಡುಗೆಯಾಗಿ ನೀಡಿದ ಕಂಚಿನಕೆರೆ ಕೆ.ಪಿ.ಪ್ರಸನ್ನ ಅವರನ್ನು ಗೌರವಿಸಲಾಯಿತು.
ದೈಹಿಕ ಶಿಕ್ಷಣ ಪರಿವೀಕ್ಷಕ ಸ್ವಾಮೇಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸ್ವಾಮಿಗೌಡ, ಚಿಕ್ಕವಡ್ಡರಗುಡಿಯ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಮಹದೇವಯ್ಯ, ಎಸ್‌ಡಿಎಂಸಿ ಅಧ್ಯಕ್ಷ ದೇವು, ಸದಸ್ಯ ಕುಮಾರ್, ಮುಖಂಡ ಶಂಭು ಇನ್ನಿತರರು ಇದ್ದರು.