ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಸರಗೂರು ತಾಲೂಕಿನ ಪಟ್ಟಣದ ಅಪ್ಪು ಅಭಿಮಾನಿಗಳ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಚಾಮುಂಡೇಶ್ವರಿ ವಧರ್ಂತಿ ಆಚರಿಸಲಾಯಿತು. ಎಸ್.ಎಲ್.ಸಂತೋಷ್ ಕುಮಾರ್, ಎಸ್.ಆರ್.ಸುರೇಶ್ ಕುಮಾರ್, ಧರಣೇಶ್, ಬೊಂಡಿರಾಮ್ ಇತರರಿದ್ದರು.
ಸರಗೂರು ತಾಲೂಕಿನ ಪಟ್ಟಣದ ಅಪ್ಪು ಅಭಿಮಾನಿಗಳ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ಚಾಮುಂಡೇಶ್ವರಿ ವಧರ್ಂತಿ ಆಚರಿಸಲಾಯಿತು. ಎಸ್.ಎಲ್.ಸಂತೋಷ್ ಕುಮಾರ್, ಎಸ್.ಆರ್.ಸುರೇಶ್ ಕುಮಾರ್, ಧರಣೇಶ್, ಬೊಂಡಿರಾಮ್ ಇತರರಿದ್ದರು.
Published on

ಸರಗೂರು:

ಸರಗೂರು ಪಟ್ಟಣದ ಎರಡನೇ ಮುಖ್ಯ ರಸ್ತೆಯ ಅಪ್ಪು ಸರ್ಕಲ್ ಬಳಿ ಅಪ್ಟು ಅಭಿಮಾನಿಗಳ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ವಾರ್ಷಿಕೋತ್ಸವ ಹಾಗೂ ತಾಯಿ ಚಾಮುಂಡೇಶ್ವರಿ ವಧರ್ಂತಿಯನ್ನು ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಮತ್ತು ಮಹಾಮಂಗಳಾರತಿಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಅಂಗವಾಗಿ ದೇವಿಗೆ ವಿವಿಧ ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ತೆಂಗಿನಕಾಯಿ, ಹಣ್ಣು-ಹಂಪಲು ಹಾಗೂ ಹೂಗಳನ್ನು ಸಮರ್ಪಿಸಿ ಕುಟುಂಬದ ಸುಖ-ಶಾಂತಿ, ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಸರ್ವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಪೂಜೆಯ ಬಳಿಕ ಅನ್ನಸಂತರ್ಪಣೆ ಮತ್ತು ಪ್ರಸಾದ ವಿತರಣೆ ನಡೆಯಿತು.
ಬಳಗದ ಅಧ್ಯಕ್ಷ ಎಸ್.ಎಲ್.ಸಂತೋಷ್ ಕುಮಾರ್, ಉಪಾಧ್ಯಕ್ಷ ಎಸ್.ಆರ್.ಸುರೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಧರಣೇಶ್, ಖಜಾಂಚಿ ಬೊಂಡಿರಾಮ್, ವರ್ತಕ ಮಂಡಳಿ ಅಧ್ಯಕ್ಷ ಎಸ್.ಪಿ.ಪ್ರಸಾದ್, ಮಾಜಿ ಅಧ್ಯಕ್ಷ ಸುರೇಶ್ ಜೈನ್, ಪ.ಪಂ.ಸದಸ್ಯ ನೂರಳಾಸ್ವಾಮಿ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನವೀನ್ ಕುಮಾರ್, ಗೆಳೆಯ ಬಳಗದ ಸದಸ್ಯರಾದ ಮಂಜುನಾಥ, ಎಸ್.ಎಲ್. ಸತೀಶ್ ಕುಮಾರ್, ಭರತ್‌ಸಿಂಗ್, ನೇಮೇಶ್, ಮಹದೇವಸ್ವಾಮಿ, ಪಾಪೇಗೌಡ, ರವಿಕುಮಾರ್ ಎಸ್.ಸಿ.ಬಸವರಾಜು, ಸ್ವಯಂ ಸೇವಕರು ಹಾಗೂ ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net