ಶಿವಯಾತ್ರೆ ತೇರಿಗೆ ವಿಶೇಷ ಪೂಜೆ

ಶಿವನ ಯಾತ್ರೆಯರನ್ನು ಎಳೆದು ತಂದ ಭಕ್ತಾದಿಗಳು ಹಾಗೂ ಬೆಬಿಂದ್ರ ಪ್ರಸಾದ್. ರವೀಂದ್ರಪ್ರಸಾದ್. ವಿಜೇಂದ್ರ ಪ್ರಸಾದ್ ದಿನೇಶ್ ಚಂದ್ರು ಶಿವನ ಭಕ್ತಾದಿಗಳು ಇದ್ದರು.
ಶಿವನ ಯಾತ್ರೆಯರನ್ನು ಎಳೆದು ತಂದ ಭಕ್ತಾದಿಗಳು ಹಾಗೂ ಬೆಬಿಂದ್ರ ಪ್ರಸಾದ್. ರವೀಂದ್ರಪ್ರಸಾದ್. ವಿಜೇಂದ್ರ ಪ್ರಸಾದ್ ದಿನೇಶ್ ಚಂದ್ರು ಶಿವನ ಭಕ್ತಾದಿಗಳು ಇದ್ದರು.
Published on
ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ಕಾವೇರಮ್ಮನ ಪ್ರತಿಮೆ ಆವರಣಕ್ಕೆ ಪಾದಯಾತ್ರೆ ಮೂಲಕ ಶಿವಯಾತ್ರೆ ತೇರನ್ನು ಭಕ್ತರು ಎಳೆದು ತಂದರು. ಗುರುವಾರ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಮ್ಮನ ಪ್ರತಿಭೆಗೆ ಹಾಗೂ ಶಿವಯಾತ್ರೆ ತೇರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರ್ಚಕ ಪ್ರಸನ್ನ ಭಟ್ಟ ನದಿಯಿಂದ ನೀರನ್ನು ತಂದು ಸ್ವಚ್ಛಗೊಳಿಸಿ ಕಾವೇರಮ್ಮನಿಗೆ ಹೊಸ ಸೀರೆ, ಕುಪ್ಪಸ ತೊಡಿಸಿ, ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ನೆರವೇರಿಸಿದರು. ಮಡಿಕೇರಿಯಿಂದ ಕುಶಾಲನಗರ ಮಾರ್ಗದಿಂದ ಶಿವನ ಭಕ್ತಾದಿಗಳು ಎಳೆದು ತಂದ ಶಿವಯಾತ್ರೆ ತೇರಿಗೆ ಪೂಜೆ ಸಲ್ಲಿಸಿ, ನಂತರ ಬಿಎಂ ರಸ್ತೆ ಮೂಲಕ ಆವರ್ತಿ ಮಾರ್ಗವಾಗಿ ಎಳೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಭಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್, ಸಂಘದ ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ರುದ್ರೇಶ್, ಚಂದ್ರು, ಕೊಪ್ಪ ನಟೇಶ್, ಕುಶಲನಗರದ ದಿನೇಶ್, ಬೌದ್ಧ ಸನ್ಯಾಸಿಗಳು ಮತ್ತು ಶಿವನಯಾತ್ರೆ ಭಕ್ತರು ಹಾಗೂ ಕೊಪ್ಪ ಗ್ರಾಮದ ಶ್ರೀ ಶಕ್ತಿ ಸಂಘದ ಮಹಿಳೆಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net