ಕನಸು ರಂಗತಂಡದಿಂದ ಮಕ್ಕಳಿಗೆ ವಿಶೇಷ ಬೇಸಿಗೆ ಶಿಬಿರ

summer camp
summer camp
Published on
ಕನಸು ರಂಗತಂಡದಿಂದ ಮಕ್ಕಳಿಗಾಗಿ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು ತಿಳಿಸಿದರು.
ಕನಸು ರಂಗತಂಡದ ಪ್ರತಿಭಾ ಪಲ್ಲವ ವಿಭಾಗವು ಈ ಬಾರಿ ಮಕ್ಕಳಿಗಾಗಿ ವಿಶಿಷ್ಟವಾಗಿ ‘ವನದ ಮನಗಳು’ ಎಂಬ ಶೀರ್ಷಿಕೆಯೊಂದಿಗೆ ಶಿಬಿರ ಆಯೋಜಿಸಿದೆ. ಈ ಶಿಬಿರವು ಮಕ್ಕಳಿಗೆ ರಂಗಭೂಮಿಯನ್ನು ಪರಿಚಯ ಮಾಡಲಿದೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಶಿಬಿರ ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬೇಸಿಗೆ ಶಿಬಿರವು ಏ.5ರಿಂದ ಮೇ 10ರವರೆಗೆ ಒಟ್ಟು 35 ದಿನಗಳ ಕಾಲ ಸಾಂಸ್ಕೃತಿಕ ಭವನ, ಗೋಕುಲಂ 3ನೇ ಹಂತ, ಮೈಸೂರು ಒನ್ ಹತ್ತಿರ ಗೋಕುಲಂ ಮೈಸೂರು ಇಲ್ಲಿ ನಡೆಯಲಿದೆ. ಈ ಬಾರಿಯ ಬೇಸಿಗೆ ಶಿಬಿರವನ್ನು ವೃಕ್ಷಮಾತೆ ಹಾಗೂ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರಿಗೆ ಸಮರ್ಪಿಸುತ್ತಿದ್ದೇವೆ. 6ರಿಂದ 15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಶಿಬಿರದಲ್ಲಿ ಮಕ್ಕಳಿಗಾಗಿ ಹಲವು ಸೃಜನಾತ್ಮಕ ಮತ್ತು ದೈಹಿಕ ಚಟುವಟಿಕೆಯನ್ನು ಆಯೋಜಿಸಲಾಗಿದೆ. ಇದರಲ್ಲಿ ಅಭಿನಯ, ಸಂಗೀತ, ಕ್ಲೀ ವರ್ಕ್, ಮಲ್ಲಕಂಬ, ವಾರಾಂತ್ಯ ನಾಟಕ ಪ್ರದರ್ಶನಗಳು, ಅರಣ್ಯ ಪ್ರವಾಸ ಸೇರಿದಂತೆ ಇನ್ನೂ ಅನೇಕ ಚಟುವಟಿಕೆ ನಡೆಯಲಿವೆ. ಈ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ, ಶಾರೀರಿಕ ಸಾಮರ್ಥ್ಯ ಮತ್ತು ಪ್ರಕೃತಿಯೊಂದಿಗೆ ನಂಟು ಬೆಳೆಸುವ ಉದ್ದೇಶವಾಗಿದೆ ಎಂದರು.
ಆಯೋಜಕರಾದ ಎಂ.ಚಂದ್ರಶೇಖರ್, ಪಿ. ಶ್ರೇಯಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net