ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಬಿಎಂ ರಸ್ತೆ ಸಮೀಪದಲ್ಲಿರುವ ಕಾವೇರಿ ಮಾತೆಗೆ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್ ನೇತೃತ್ವದಲ್ಲಿ ಅರ್ಚಕ ಪ್ರಸನ್ನಭಟ್ಟ ಅವರು ಕಾವೇರಿ ನದಿಯಿಂದ ನೀರನ್ನು ತಂದು ವಿಗ್ರಹ ಸ್ವಚ್ಛಗೊಳಿಸಿ ಹೊಸ ಸೀರೆ, ಒಡವೆಗಳನ್ನು ಧರಿಸಿ, ಅರಿಶಿಣ, ಕುಂಕುಮ, ವಿವಿಧ ಹೂವುಗಳಿಂದ ಅಲಂಕರಿಸಿ, ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಿದರು.
ಮೈಮುಲ್ ಮಾಜಿ ಅಧ್ಯಕ್ಷ ಪ್ರಸನ್ನ ಮಾತನಾಡಿ, ಬಿಸಿಲಿನ ತಾಪಮಾನ ದಿನೇ ದಿನೆ ಹೆಚ್ಚಾಗುತ್ತಿದ್ದು ಅಂತರ್ಜಲ ಬತ್ತಿ, ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಮಳೆಯಾಗಲಿ ಎಂದು ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್ ಮಾತನಾಡಿದರು. ಮುಖಂಡರಾದ ಪ್ರಸನ್ನ, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಚಂದ್ರು, ರುದ್ರೇಶ್, ಮೂರ್ತಿ, ರವಿ, ತಿಲಕ್, ಭಕ್ತಾದಿಗಳಾದ ಮಹಾಲಿಂಗ ಸ್ವಾಮಿ, ತ್ರಿನೇಶ್, ರವಿಕುಮಾರ್, ಶ್ರೀನಿವಾಸ್, ಮಹಿಳೆಯರು ಇದ್ದರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.