ಮಾ.1ರಂದು ವಿಶೇಷ ಆಟೋಟ

ವಿಶೇಷ ಆಟೋಟ
ವಿಶೇಷ ಆಟೋಟ
Published on
ಮೈಸೂರು: ರೋಟರಿ ಮಿಡ್ ಟೌನ್ ವತಿಯಿಂದ ಮಾ.1ರಂದು ಬೆಳಗ್ಗೆ 9ಕ್ಕೆ ನಗರದ ಓವಲ್ ಮೈದಾನದಲ್ಲಿ ಬಾಂಧವ್ಯ ಶೀರ್ಷಿಕೆಯಡಿ ವಿಶೇಷ ಮಕ್ಕಳು, ಪಾಲಕರು, ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಕೇಶ್ ಬಾಬು ತಿಳಿಸಿದರು.
ಸುಮಾರು 500 ವಿಶೇಷ ಮಕ್ಕಳು ಪಾಲ್ಗೊಳ್ಳಲಿದ್ದಾರೆ. 8 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ವಿಶೇಷ ಆಟೋಟ, ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಓಟ, ಲಾಂಗ್ ಜಂಪ್, ಶಾಟ್‌ಪುಟ್ ಮೊದಲಾದ ಕ್ರೀಡೆ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಕೆ.ವಿ.ಭಾಸ್ಕರ್, ಎಚ್.ಎಸ್.ವೀರೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net