ಮೈಸೂರು ವಿವಿ ಸಮಸ್ಯೆಯತ್ತ ವಿಶೇಷ ಗಮನ: ಸಿಎಂ ಅಭಯ

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ಮೈವಿವಿಗೆ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಅನುದಾನ ಇಲ್ಲ.
  • ಈ ಸ್ಥಿತಿಗೆ ಹಿಂದಿನ ಕುಲಪತಿಗಳೇ ಕಾರಣ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಸರಿಪಡಿಸಲು ವಿಶೇಷ ಗಮನ ನೀಡಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು
ಮೈವಿವಿಗೆ ನಿವೃತ್ತ ನೌಕರರಿಗೆ ಪಿಂಚಣಿ ನೀಡಲು ಅನುದಾನ ಇಲ್ಲ. ಈ ಸ್ಥಿತಿಗೆ ಹಿಂದಿನ ಕುಲಪತಿಗಳೇ ಕಾರಣ ಎಂದು ದೂರಿದರು.
ಇದಕ್ಕೂ ಮುನ್ನ ಮಾತನಾಡಿದ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಅಧ್ಯಾಪಕರ ಕೊರತೆಯಿಂದ ನಲುಗಿರುವ ಮೈಸೂರು ವಿಶ್ವವಿದ್ಯಾಲಯವನ್ನು ಉಳಿಸುವ ಕೆಲಸವಾಗಬೇಕು. ಹಿಂದಿನ ಗೌರವ, ಘನತೆಯನ್ನು ಉಳಿಸಿಕೊಳ್ಳಬೇಕು ಎಂದು ಸಿಎಂ ಅವರನ್ನು ಆಗ್ರಹಿಸಿದರು.
ಕುಲಪತಿಗಳನ್ನು ಗುತ್ತಿಗೆದಾರನ್ನಾಗಿ ಮಾಡಲಾಗಿದೆ. ವಿವಿ ಘನತೆ ಕಟ್ಟಡದಿಂದ ಉಳಿಯಲ್ಲ. ಮೈವಿವಿ ಕಳಪೆ ಸ್ಥಿತಿಗೆ ಇಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ನಗರವನ್ನು ಮತ್ತೊಂದು ಬೆಂಗಳೂರು ಆಗಲು ಬಿಡಬಾರದು. ಇದು ರಿಯಲ್ ಎಸ್ಟೇಟ್ ಮಾಫಿಯಾದ ಕೈಗೆ ಇದನ್ನು ಕೊಡಬಾರದು. ಮೈಸೂರನ್ನು ಮೈಸೂರಾಗಿ ಉಳಿಸಬೇಕು ಎಂದೂ ಒತ್ತಾಯಿಸಿದರು.
ದೇಶದಲ್ಲಿ ಅಸಮಾನತೆ ಹೆಚ್ಚಾಗಿದ್ದು, ಬ್ರಿಟಿಷರ ಕಾಲಕ್ಕಿಂತ ಕೆಳಗೆ ಇಳಿದಿದೆ. ಮಾಧ್ಯಮಗಳಲ್ಲಿ ರೈತರು, ದಲಿತರು, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸುದ್ದಿಗಳು ಕಡಿಮೆಯಾಗಿವೆ. 2022ರ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ.90ರಷ್ಟು ನಾಯಕತ್ವ ಮೇಲ್ವರ್ಗದವವರ ಬಳಿ ಇದೆ.
 ಮಾಧ್ಯಮಗಳಲ್ಲಿರುವ ನಿರ್ಣಾಯಕ ಹುದ್ದೆಗಳಲ್ಲಿ ದಲಿತರು, ಆದಿವಾಸಿಗಳ ಪ್ರಮಾಣ ಶೂನ್ಯದಷ್ಟಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net