ಮೈಸೂರಿನಲ್ಲಿ ಸ್ಪೇನ್ ಮಹಿಳೆಗೆ ಬೈಕ್ ಡಿಕ್ಕಿ

ಅಪರಾಧ
ಅಪರಾಧ
Published on

ಪ್ರಮುಖ ಮುಖ್ಯಾಂಶಗಳು

  • ಅನ್ಯ ಯುವಕನೊಂದಿಗೆ ಸ್ನೇಹ ಮಾಡಿದ್ದಕ್ಕಾಗಿ ಯೋಗ ವಿದ್ಯಾರ್ಥಿಯಿಂದ ಕೃತ್ಯ
ಮೈಸೂರು: ಅನ್ಯ ಯುವಕನೊಂದಿಗೆ ಸ್ನೇಹ ಮಾಡಿದ್ದಕ್ಕಾಗಿ ಸ್ಪೇನ್ ದೇಶದ ಮಹಿಳೆಗೆ ಯೋಗ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಬೈಕ್‌ನಿಂದ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾನೆ.
ಮಿರಿಯಾ ಸಬಾಟಿರ್ ಒಲಿಯು ಎಂಬುವರು ಗಾಯಗೊಂಡ ಸ್ಪೇನ್ ದೇಶದ ಪ್ರಜೆ. ರಾಹುಲ್ ದತ್ತ ಎಂಬಾತನೇ ಆರೋಪಿ.
2025ರ ಮಾರ್ಚ್‌ನಲ್ಲಿ ಮಿರಿಯಾ ಯೋಗ ಕಾರ್ಯಕ್ರಮಕ್ಕಾಗಿ ನಗರಕ್ಕೆ ಬಂದಿದ್ದರು. ಗೀತಾ ರಸ್ತೆಯಲ್ಲಿರುವ ಯೋಗ ಕೇಂದ್ರವೊಂದರ ಕಾರ್ಯಕ್ರಮದಲ್ಲಿ ಈತನ ಪರಿಚಯವಾಗಿದೆ. ಮಿರಿಯಾ ಸ್ವದೇಶಕ್ಕೆ ಹಿಂದಿರುಗಿದ ಬಳಿಕ ಮೊಬೈಲ್ ಮೂಲಕ ಇಬ್ಬರು ಸಂಪರ್ಕದಲ್ಲಿದ್ದರು.
ಮತ್ತೆ ಮಿರಿಯಾ ಮೈಸೂರಿಗೆ ಬಂದಿದ್ದು, ಕಳೆದ 9 ತಿಂಗಳಿನಲ್ಲಿ ನಿನಗೆ ಬೇರೆ ಹುಡುಗ ಫ್ರೆಂಡ್ ಆಗಿದ್ದಾನಾ? ಎಂದು ರಾಹುಲ್ ಪ್ರಶ್ನಿಸಿದ್ದಾನೆ. ಇದಕ್ಕೆ ಹೌದು. ಒಬ್ಬ ಸ್ನೇಹಿತನಿದ್ದಾನೆ ಎಂದು ಮಿರಿಯಾ ತಿಳಿಸಿದ್ದಾರೆ. 
ಇಷ್ಟಕ್ಕೆ ಬೇಸರಗೊಂಡ ಆರೋಪಿ, ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಬೈಕ್ ಮೂಲಕ ಡಿಕ್ಕಿ ಹೊಡೆದು ಗಾಯಗೊಳಿಸಿ ಪರಾರಿಯಾಗಿದ್ದಾನೆ. 
ಗಾಯಗೊಂಡ ಇವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net