ನಾಲ್ಕು ದಿನಗಳ ಹಿಂದೆಯೇ ಮನೆಯಲ್ಲಿ ತಾಯಿ ರತ್ನಮ್ಮ ಅವರನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದ
ಮನೆಯಿಂದ ಯಾರೂ ಹೊರ ಬಾರದೆ ಇದ್ದು, ದುರ್ವಾಸನೆ ಬರುತ್ತಿದ್ದರಿಂದ ನೆರೆ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ
ಮೈಸೂರು:ತಾಯಿಯನ್ನೇ ಕೊಂದ ಮಾನಸಿಕ ಅಸ್ವಸ್ಥನೊಬ್ಬ ನಾಲ್ಕು ದಿನ ಮನೆಯಲ್ಲಿ ಶವದೊಂದಿಗೆ ವಾಸವಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಡಾ.ರಾಜ್‌ಕುಮಾರ್ ರಸ್ತೆಯ ಜೆಎಸ್‌ಎಸ್ ಲೇಔಟ್‌ನ ನಿವಾಸಿಯಾಗಿದ್ದ ಸರ್ಕಾರಿ ನಿವೃತ್ತ ಅಧಿಕಾರಿ ರತ್ನಮ್ಮ (74) ಕೊಲೆಯಾಗಿದ್ದು, ಪುತ್ರ ಅರುಣ್ ಕುಮಾರ್(39)ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ ಅರುಣ್ ಕುಮಾರ್, ತಾಯಿಯೊಂದಿಗೆ ಮನೆಯಲ್ಲಿ ವಾಸವಿದ್ದ. ನಾಲ್ಕು ದಿನಗಳ ಹಿಂದೆಯೇ ಮನೆಯಲ್ಲಿ ತಾಯಿ ರತ್ನಮ್ಮ ಅವರನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಶವದೊಂದಿಗೆ ಅದೇ ಮನೆಯಲ್ಲಿ ಇದ್ದ.
ಮನೆಯಿಂದ ಯಾರೂ ಹೊರ ಬಾರದೆ ಇದ್ದು, ದುರ್ವಾಸನೆ ಬರುತ್ತಿದ್ದರಿಂದ ನೆರೆ ಮನೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿದಾಗ ರತ್ನಮ್ಮ ಶವವಾಗಿ ಬಿದ್ದಿದ್ದು, ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಈ ವೇಳೆ ಸ್ಥಳದಲ್ಲಿದ್ದ ಪುತ್ರ ಅರುಣ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ‘ತಾಯಿ ತೊಂದರೆ ಕೊಡುತ್ತಿದ್ದರಿಂದ ನಾನೇ ಹೊಡೆದು ಕೊಲೆ ಮಾಡಿದೆ’ ಎಂದು ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆ ಪೊಲೀಸರು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ.