ಶ್ರೀವಾಲ್ಮೀಕಿ ಸಮಾಗಮ ಸೌಹಾರ್ದ ಸಹಕಾರ ಸಂಘಕ್ಕೆ ಸೋಮೇಶ್ ಆಯ್ಕೆ

 ನಗರದ ಶ್ರೀ ವಾಲ್ಮೀಕಿ ಸಮಾಗಮ ಸೌಹಾರ್ದ ಸಂಘದ ಅಧ್ಯಕ್ಷರಾಗಿ ಸೋಮೇಶ್ ನಾಯಕ ಹಾಗೂ ರಾಜಪ್ಪ ವಿರೋಧವಾಗಿ ಆಯ್ಕೆಯಾದರು. ಕಳಲೆ ಕೆ.ಡಿ. ಮಂಜು, ಸುಧೀಂದ್ರ ಕುಮಾರ್ ಇತರರು ಇದ್ದರು.
ನಗರದ ಶ್ರೀ ವಾಲ್ಮೀಕಿ ಸಮಾಗಮ ಸೌಹಾರ್ದ ಸಂಘದ ಅಧ್ಯಕ್ಷರಾಗಿ ಸೋಮೇಶ್ ನಾಯಕ ಹಾಗೂ ರಾಜಪ್ಪ ವಿರೋಧವಾಗಿ ಆಯ್ಕೆಯಾದರು. ಕಳಲೆ ಕೆ.ಡಿ. ಮಂಜು, ಸುಧೀಂದ್ರ ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Srivalmiki Samagama Souharda Cooperative Society
ನಂಜನಗೂಡು: ನಗರದ ಶ್ರೀವಾಲ್ಮೀಕಿ ಸಮಾಗಮ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮೇಶ್ ನಾಯಕ ಹಾಗೂ ಉಪಾಧ್ಯಕ್ಷರಾಗಿ ರಾಜ್ಯಪ್ಪ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆಯಬೇಕಿದ್ದ ಚುನಾವಣೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಧನಲಕ್ಷ್ಮೀ ಅವಿರೋಧ ಆಯ್ಕೆಯನ್ನು ಖಚಿತಪಡಿಸಿದರು.
ನಂತರ ನೂತನ ಅಧ್ಯಕ್ಷ ಸೋಮೇಶ ನಾಯಕ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಂಘದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಎಲ್ಲರಿಗೂ ತಲುಪಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಸಂಘದ ಉಪಾಧ್ಯಕ್ಷರಾಗಿ ರಾಜಪ್ಪ, ನಿರ್ದೇಶಕರಾಗಿ ಎಸ್.ಮಹೇಶ್, ಎನ್.ಎಂ. ಮಹದೇವಸ್ವಾಮಿ ರವೀಂದ್ರ, ಸಿ.ಹೊಣಕಾರ ನಾಯಕ, ಎಂ.ಶಿವಣ್ಣ, ಆರ್. ರಂಗಸ್ವಾಮಿ, ಎಂ. ಕಾವ್ಯಾ ಮಣಿಕಂಠ, ಆರೋಗ್ಯ ಶಾರದಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಂಗಾರ ಗಿರಿ ನಾಯಕ, ನಾಮ ನಿರ್ದೇಶಿತರಾಗಿ ಹೆಡತಲೆ ಮಹೇಶ್, ಕಳಲೆ ಕೆ.ಡಿ. ಮಂಜು, ಸುಧೀಂದ್ರ ಕುಮಾರ್, ಮಣಿಕಂಠ ಆಯ್ಕೆಯಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net