ಕುವೆಂಪು ಕನ್ನಡ ಅಧ್ಯಯ ಸಂಸ್ಥೆ, ಪ್ರೊ.ಸಿ.ಪಿ.ಸಿದ್ದಾಶ್ರಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಷ್ಠಾನ ಉದ್ಘಾಟನೆ, ಪರಸಪ್ಪ-ನಾಗಮ್ಮ ದಂಪತಿ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಆಡಳಿತದಲ್ಲಿ ಕನ್ನಡ ಜಾರಿಗೆ ಸರ್ಕಾರ ಪ್ರಯತ್ನಿಸುತ್ತಿವೆಯೇ ಹೊರತು, ಶಿಕ್ಷಣದಲ್ಲಿ ಕನ್ನಡವನ್ನು ಸಾಕಾರಗೊಳಿಸುತ್ತಿಲ್ಲ. ಇದು ಒಂದು ಕೇವಲ ಭಾಷೆಯ ವಿಷಯವಾಗಿರದೆ ನಮ್ಮ ಸಂಸ್ಕೃತಿ, ಚಲನಚಿತ್ರ, ಸಾಹಿತ್ಯದ ಮೂಲಕ ಪರಿಣಾಮ ಬೀರುತ್ತದೆ. ಮುಂದೊಂದು ದಿನ ಕನ್ನಡ ಭಾಷೆಗೆ ಕಂಟಕ ಎದುರಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.