ಯೋಜನೆಯ ನಂಜನಗೂಡು ಕ್ಷೇತ್ರ ಯೋಜನಾಧಿಕಾರಿ ಧರ್ಮರಾಜು ಮಾತನಾಡಿ, ನಂಜಮ್ಮ 7 ವರ್ಷಗಳಿಂದ ನಡೆದಾಡಲು ತೊಂದರೆ ಪಡುತ್ತಿದ್ದರು. ಇದನ್ನು ಅರಿತು ಸಂಸ್ಥೆಯಿಂದ ಉಚಿತವಾಗಿ ವೀಲ್‌ಚೇರ್ ನೀಡಲಾಗಿದೆ. ಅನಾರೋಗ್ಯ ಪೀಡಿತರು, ವಿಕಲಚೇತನರು ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿ ಬದುಕಲು ನೆರವಾಗುವಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಉಚಿತವಾಗಿ ವೀಲ್‌ಚೇರ್, ಲೆಗ್‌ಸ್ಟಿಕ್, ವಾಟರ್ ಬೆಡ್, ವಾಕರ್‌ಗಳನ್ನು ನೀಡುತ್ತಿದೆ ಎಂದು ಹೇಳಿದರು.