ಪರಿಸರ ಜಾಗೃತಿಯೊಂದಿಗೆ ಗಾನ ಸುಧೆ

 ನೇಸರಾ.... ನೋಡು! ಕವಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು. ಕೆ.ಆರ್.ಪ್ರಭಾಕರ ರಾವ್ , ಪ್ರವೀಣ್ ಪಾಲ್, ಸಿ.ಡಿ.ಕೃಷ್ಣ, ಎಸ್.ವಾಸುದೇವನ್, ನಾಗರಾಜ್ ವಿ.ಬೈರಿ ಮತ್ತಿತರರಿದ್ದರು.
ನೇಸರಾ.... ನೋಡು! ಕವಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು. ಕೆ.ಆರ್.ಪ್ರಭಾಕರ ರಾವ್ , ಪ್ರವೀಣ್ ಪಾಲ್, ಸಿ.ಡಿ.ಕೃಷ್ಣ, ಎಸ್.ವಾಸುದೇವನ್, ನಾಗರಾಜ್ ವಿ.ಬೈರಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೇಸರಾ.... ನೋಡು! ಕವಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ
 ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ, ಪರಿಸರ ಮಾಸಾಚರಣೆ ಸಮಿತಿ, ಸ್ಫೂರ್ತಿ ಬಿ.ಎ.ಐ.ಮಹಿಳಾ ಘಟಕ ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನೇಸರಾ.... ನೋಡು! ಕವಿ ಚಿತ್ರಗೀತೆಗಳ ಗಾಯನ ಕಾರ್ಯಕ್ರಮವನ್ನು ಎಂಬಿಸಿಟಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಪ್ರಕೃತಿಯ ಸೊಬಗನ್ನು ವರ್ಣಿಸುವ ಗೀತೆಗಳ ಈ ಅಪೂರ್ವ ಸಾಂಸ್ಕೃತಿಕ ಸಂಜೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಪ್ರಕೃತಿ ಮಾಸದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ನೆರೆದಿದ್ದ ಸಂಗೀತ ಪ್ರೇಮಿಗಳಿಗೆ ಪರಿಸರ ಜಾಗೃತಿಯೊಂದಿಗೆ ಗಾನದ ರಸದೌತಣ ಉಣಬಡಿಸಿತು.
ಗಾಯಕರಾದ ನಿತಿನ್ ರಾಜಾರಾಮ್ ಶಾಸ್ತ್ರಿ, ರಶ್ಮಿ ಚಿಕ್ಕಮಗಳೂರು, ಲಕ್ಷ್ಮೀ ದಿನೇಶ್, ನರಸಿಂಹಮೂರ್ತಿ, ತ್ಯಾಗರಾಜ್ ತಮ್ಮ ಸುಮಧುರ ಕಂಠದಿಂದ ಹಾಡಿನಿಂದ ಪ್ರೇಕ್ಷಕರ ಮನಸೂರೆಗೊಳಿಸಿದರು.
ಗಾಯಕರಿಗೆ ಅಷ್ಟೇ ಅದ್ಭುತವಾಗಿ ಸಾಥ್ ನೀಡಿದ ವಾದ್ಯವೃಂದದ ಪುರುಷೋತ್ತಮ್(ಕೀ ಬೋರ್ಡ್), ಗುರುದತ್ (ರಿದಂ ಪ್ಯಾಡ್), ರೋಷನ್ ಸೂರ್ಯ (ತಬಲ) ಹಾಗೂ ಪುನೀತ್ (ಕೊಳಲು) ಗೀತೆಗಳಿಗೆ ತಕ್ಕಂತೆ ಮನಮೋಹಕವಾಗಿ ವಾದ್ಯ ನುಡಿಸಿ ಸಂಗೀತದ ರಂಗನ್ನು ಹೆಚ್ಚಿಸಿದರು. 
ಇಡೀ ಕಾರ್ಯಕ್ರಮವನ್ನು ಯಡಿಯೂರ್ ಸಮೀವುಲ್ಲಾ ಅವರು ತಮ್ಮ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದರು.
ಬಿ.ಎ.ಐ.ಮೈಸೂರು ಘಟಕದ ಛೇರ್ಮನ್ ಕೆ.ಆರ್.ಪ್ರಭಾಕರ ರಾವ್, ಕಾರ್ಯದರ್ಶಿ ಪ್ರವೀಣ್ ಪಾಲ್, ಪರಿಸರ ಸಮಿತಿ ಅಧ್ಯಕ್ಷ ಸಿ.ಡಿ.ಕೃಷ್ಣ, ಕಾರ್ಯದರ್ಶಿ ಎಸ್.ವಾಸುದೇವನ್, ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಎನ್.ಸುಬ್ರಮಣ್ಯ, ಸ್ಫೂರ್ತಿ ಸಂಸ್ಥೆಯ ಅಧ್ಯಕ್ಷೆ ಶಾಂತಿ ಭಾರದ್ವಾಜ್, ಕಾರ್ಯದರ್ಶಿ ವೀಣಾ ಅಶೋಕ್, ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಉಪಸ್ಥಿತರಿದ್ದರು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net