ಬಹುಭಾಷಾ ಚಿತ್ರಗೀತೆಗಳ ಗಾಯನ

 ಗಾಯನ
ಗಾಯನ
Published on

ನೆನಪಿರಲಿ ಎ ಮೈಸೂರು ಮ್ಯೂಸಿಕಲ್ ಟೀಂ ಹಾಗೂ ರಾಗ ರಿಯಾ ಕರೋಕೆ ಫೌಂಡೇಷನ್‌ಯಿಂದ ಸ್ವಾತಂತ್ರ್ಯ ದಿನದ ಅಂಗವಾಗಿ ಆ.24ರಂದು ಬಹುಭಾಷಾ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಗ ರಿಯಾ ಕರೋಕೆ ಫೌಂಡೇಷನ್ ಸಂಸ್ಥಾಪಕಿ ರೇಖಾ ಗೌತಮ್ ತಿಳಿಸಿದರು.

ನಾದಬ್ರಹ್ಮ ಸಂಗೀತ ಸಭಾದಲ್ಲಿ ಅಂದು ಸಂಜೆ 4.30ರಿಂದ ರಾತ್ರಿ 9.30ರವರೆಗೆ ಕನ್ನಡ ಸೇರಿದಂತೆ ಬಹುಭಾಷಾ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಹಿರಿಯ ಗಾಯಕರು ಹಾಗೂ ವಿದ್ಯಾವರ್ಧಕ ಕಾಲೇಜಿನ ಕಿರಿಯ ಗಾಯಕರು 30ಕ್ಕೂ ಹೆಚ್ಚು ಗೀತೆಗಳನ್ನು ಹಾಡಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net