ಹೆಣ್ಣಿನ ಬಗ್ಗೆ ಅತೀವ ಕಾಳಜಿ ಹೊಂದಿದ್ದ ತ್ರಿವೇಣಿ ಶಂಕರ್

ನಂಜನಗೂಡು ನಗರದ ಶ್ರೀ ಭಾರತೀ ತೀರ್ಥ ಸಭಾಂಗಣ ಶೃಂಗೇರಿ ಶಂಕರ ಮಠದಲ್ಲಿ ಸಾಹಿತಿ ತ್ರಿವೇಣಿ ಶಂಕರ್ ಅವರ ಸಾಹಿತ್ಯದ ಕನ್ನಡ ಚಿತ್ರಗೀತೆಗಳ ಗಾಯನ ನಡೆಯಿತು.
ನಂಜನಗೂಡು ನಗರದ ಶ್ರೀ ಭಾರತೀ ತೀರ್ಥ ಸಭಾಂಗಣ ಶೃಂಗೇರಿ ಶಂಕರ ಮಠದಲ್ಲಿ ಸಾಹಿತಿ ತ್ರಿವೇಣಿ ಶಂಕರ್ ಅವರ ಸಾಹಿತ್ಯದ ಕನ್ನಡ ಚಿತ್ರಗೀತೆಗಳ ಗಾಯನ ನಡೆಯಿತು.
Published on
ನಂಜನಗೂಡು: ತ್ರಿವೇಣಿ ಶಂಕರ್ ಅವರು ಆಗಿನ ಕಾಲದಲ್ಲಿಯೇ ಹೆಣ್ಣಿನ ಬಗ್ಗೆ ಅತೀವ ಕಾಳಜಿ ಹೊಂದಿದ್ದವರು ಎಂದು ಸಾಹಿತಿ ಮೀರಾ ಶಂಕರ್ ಹೇಳಿದರು.
ನಗರದ ಶ್ರೀ ಭಾರತೀ ತೀರ್ಥ ಸಭಾಂಗಣ ಶೃಂಗೇರಿ ಶಂಕರ ಮಠದಲ್ಲಿ ತ್ರೀವೇಣಿ ಶಂಕರ್ ಸಾಹಿತ್ಯ ಪ್ರತಿಷ್ಠಾನ ಮತ್ತು ಹವ್ಯಾಸಿ ಕಲಾವಿದರ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ಖ್ಯಾತ ಲೇಖಕಿ, ಬರಹಗಾರ್ತಿ, ಸಾಹಿತಿ ತ್ರಿವೇಣಿ ಶಂಕರ್ ಅವರ ತ್ರಿವೇಣಿ ಕಾದಂಬರಿಗಳ ಒಂದು ಅವಲೋಕನ, ಕಾದಂಬರಿ ಆಧಾರಿತ ಚಲನಚಿತ್ರ ಗೀತಗಳ ಮಧುರ ಹಾಡುಗಳ ಇಂಪನ ಸಾಹಿತ್ಯ-ಸಂಗೀತ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತ್ರಿವೇಣಿ ತಮ್ಮ ಕೃತಿಗಳ ಮೂಲಕ ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಸ್ಥಿತಿಗತಿ, ಅದರ ವಿರುದ್ಧ ತಮ್ಮ ಸಾಹಿತ್ಯದಿಂದಲೇ ದನಿಯೆತ್ತಿದವರು ಅವರ ಸಾಹಿತ್ಯದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವಿತ್ತು. ಅವರು ಬಾಳಿ ಬದುಕಿದ್ದ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಮನೆಯನ್ನು ನವೀಕರಣಗೊಳಿಸಿ ಮ್ಯೂಸಿಯಂ ಮಾಡಲಾಗಿದೆ. ಅವರ ಕೃತಿಗಳಾದ ಬೆಳ್ಳಿಮೋಡ, ಶರಪಂಜರ, ಬೆಕ್ಕಿನ ಕಣ್ಣು, ಹೂವು ಹಣ್ಣು ಮುಂತಾದ ಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುವುದು. ಜತೆಗೆ ಅವರ ನಿವಾಸದ ಪಕ್ಕದಲ್ಲಿಯೇ ಬೆಳ್ಳಿ ಮೋಡ ನಾಮಾಂಕಿತದಲ್ಲಿ ಸಭಾಂಗಣ ನಿರ್ಮಿಸಲಾಗುವುದು. ತ್ರಿವೇಣಿ ಶಂಕರ ಸಾಹಿತ್ಯ ಪ್ರತಿಷ್ಠಾನದಿಂದ ಅವರ ಕಾದಂಬರಿಗಳನ್ನು ಮರು ಮುದ್ರಣಕ್ಕೆ ನೀಡಲಾಗುವುದು ಮತ್ತು ಅವುಗಳ ಬಗ್ಗೆ ಸಂಶೋಧನೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತ್ರಿವೇಣಿ ಅವರು ರಚಿಸಿದ ಕಾದಂಬರಿಗಳ ಆಧಾರಿತ ಚಲನಚಿತ್ರ ಮಧುರ ಹಾಡಗಳ ಗಾಯನ ನಡೆಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಡಿ.ಸತೀಶ್ ಚಂದ್ರ, ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಅರ್ಚನಾ, ಹವ್ಯಾಸಿ ಕಲಾವಿದರ ಬಳಗದ ಗೋಪಿನಾಥ್, ಶಿಕ್ಷಕ ಇಂದ್ರೇಶ್, ಸೌಮ್ಯಶ್ರಿ, ಶೋಭಾ, ನಾಗ, ಶೌರ್ಯ, ನಂದ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net