ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿದ ಅಂತಾರಾಷ್ಟ್ರೀಯಮಟ್ಟದ ಮಿಕ್ಸ್ ಬಾಕ್ಸಿಂಗ್ ಕ್ರೀಡಾಪಟು ನಯನಾ ಕುಕ್ಕೂರು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
9 ವರ್ಷದ ಬಾಲ ಪ್ರತಿಭೆಯಾಗಿರುವ ನಯನಾ ಕುಕ್ಕೂರು ಅವರ ಈ ಸಾಧನೆಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮಿಕ್ಸ್ ಬಾಕ್ಸಿಂಗ್ ಕರ್ನಾಟಕದ ಅಧ್ಯಕ್ಷ ಚಂದ್ರು, ನಯನಾ ಇನ್ನೂ ಹೆಚ್ಚಿನ ಸಾಧನೆ ಮಾಡಿ ಅಂತಾರಾಷ್ಟ್ರೀಯಮಟ್ಟದಲ್ಲಿ ಭಾರತಕ್ಕೆ ಮತ್ತಷ್ಟು ಗೌರವ ತಂದುಕೊಡುವ ವಿಶ್ವಾಸವಿದೆ ಎಂದರು.