ಧರ್ಮಗುರು ಗುರು ಜೋಸೆಫ್ ಮರಿ ಎ. ಅವರು ಪವಿತ್ರ ಯಾಜಕ ದೀಕ್ಷೆಯನ್ನು ಸ್ವೀಕರಿಸಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸನ್ಮಾನಿಸಿದರು. ಸಂತೋಷ್, ರಾಯಪ್ಪ, ಹೃದಯರಾಜ್, ಕುಮಾರ್, ನೇರಳಕುಪ್ಪೆ ಮಹದೇವ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎ.ಜೋಸೆಫ್ ಮರಿಗೆ ಸನ್ಮಾನ
ಹನಗೋಡು: ಹನಗೋಡು ಹೋಬಳಿ ಕೂಡ್ಲೂರು ಗ್ರಾಮದ ನಿವಾಸಿ ಹಾಗೂ ಮೈಸೂರಿನ ಆರ್‌ಬಿಐ ಸಮೀಪವಿರುವ ಚರ್ಚ್‌ನ ಧರ್ಮಗುರು ಎ.ಜೋಸೆಫ್ ಮರಿ ಅವರು ಪವಿತ್ರ ಯಾಜಕ ದೀಕ್ಷೆಯನ್ನು ಸ್ವೀಕರಿಸಿ 25 ವರ್ಷಗಳಾದ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವವನ್ನು ಸಡಗರದಿಂದ ಆಚರಿಸಲಾಯಿತು.
ಕೂಡ್ಲೂರು ಗ್ರಾಮದ ಅಮಲೋದ್ಭವ ಮಾತೆಯ ದೇವಾಲಯದಲ್ಲಿ ಮೈಸೂರು ಧರ್ಮಾಧ್ಯಕ್ಷ ಡಾ.ಎಸ್.ಜೆ.ಫ್ರಾನ್ಸಿಸ್ ಸೆರಾವೋ ಆಶೀರ್ವಚನ ನೀಡಿದರು. ಸಮಾರಂಭದ ಬಳಿಕ ನಿವಾಸಕ್ಕೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ ಧರ್ಮಗುರು ಎ.ಜೋಸೆಫ್ ಮರಿ ಅವರನ್ನು ಸನ್ಮಾನಿಸಿ, ಶುಭ ಕೋರಿದರು.
ಬಳಿಕ ಮಾತನಾಡಿ, ಧರ್ಮಸಭೆಯ ಸೇವೆಯಲ್ಲಿ ನಿಷ್ಠೆಯಿಂದ ಮತ್ತು ಭಕ್ತಿಯಿಂದ ಪಾಲನಾ ಸೇವೆ ನಿರ್ವಹಿಸುತ್ತ ಹಾಗೂ ಯೇಸು ಕ್ರಿಸ್ತರ ಕೃಪೆಯನ್ನು ಅನುಭವಿಸುತ್ತ ಬಂದಿದ್ದಾರೆ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಕುಮಾರ್, ಸಂತೋಷ್, ರಾಯಪ್ಪ, ಅಂತಪ್ಪ, ಅಂಜಲಿ, ಹೃದಯರಾಜ್, ಜಿಲ್ಲಾ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಇತರರು ಇದ್ದರು.