ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನ

ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಂತೆಮಾಳ ವೃತ್ತದಲ್ಲಿ ಭಾನುವಾರ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತ ಜಾಗೃತಿ ಯಾತ್ರೆಯ ಅರಿವು ಕಾರ್ಯಕ್ರಮವನ್ನು ನಡೆಸಿದರು. ಅತ್ತಹಳ್ಳಿ ದೇವರಾಜ್, ಬನ್ನೂರು ಸೂರಿ, ಎ.ಎನ್.ಮಹೇಶ್, ಪಿ.ನವೀನ್, ಕುಂತನಹಳ್ಳಿ ಕುಳ್ಳೇಗೌಡ, ಸ್ವಾಮಿ, ಮಹೇಶ್ ಇತರರು ಇದ್ದರು.
ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಂತೆಮಾಳ ವೃತ್ತದಲ್ಲಿ ಭಾನುವಾರ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತ ಜಾಗೃತಿ ಯಾತ್ರೆಯ ಅರಿವು ಕಾರ್ಯಕ್ರಮವನ್ನು ನಡೆಸಿದರು. ಅತ್ತಹಳ್ಳಿ ದೇವರಾಜ್, ಬನ್ನೂರು ಸೂರಿ, ಎ.ಎನ್.ಮಹೇಶ್, ಪಿ.ನವೀನ್, ಕುಂತನಹಳ್ಳಿ ಕುಳ್ಳೇಗೌಡ, ಸ್ವಾಮಿ, ಮಹೇಶ್ ಇತರರು ಇದ್ದರು.
Published on
ತಿ.ನರಸೀಪುರ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗಾಗಿ ಆಗ್ರಹಿಸಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಹೇಳಿದರು.
ರೈತ ಸಮಾವೇಶದ ಹಿನ್ನೆಲೆಯಲ್ಲಿ ತಾಲೂಕಿನ ಬನ್ನೂರು ಪಟ್ಟಣದ ಸಂತೆಮಾಳದ ಬಸವೇಶ್ವರ ಸರ್ಕಲ್‌ನಲ್ಲಿ ಭಾನುವಾರ ಕರಪತ್ರ ಹಂಚುವ ಮೂಲಕ ರೈತರನ್ನು ಜಾಗೃತಿ ಮೂಡಿಸಿ ಮಾತನಾಡಿದ ಅವರು, ದೇಶದಲ್ಲಿ ಬೆಳೆಗೆ ಎಂಎಸ್‌ಪಿ ಖಾತರಿ ಕಾನೂನು ಇಲ್ಲದ ಕಾರಣ ರೈತರು ವರ್ಷಕ್ಕೆ 15 ಲಕ್ಷ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದಾರೆ. ರೈತರಲ್ಲಿ ಜಾಗೃತಿ ಮೂಡಿಸಿ ಸರ್ಕಾರವನ್ನು ಎಚ್ಚರಿಸಲು ಫೆ.7 ರಿಂದ ಬೃಹತ್ ರೈತ ಜಾಗೃತಿ ಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿದೆ ಎಂದರು.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತ ನಾಯಕರ ನೇತೃತ್ವದ ರೈತ ಜಾಗೃತಿ ಯಾತ್ರೆ ಫೆ.11ರ ಬುಧವಾರ ಬೆಳಗ್ಗೆ 11 ಗಂಟೆಗೆ ಮೈಸೂರಿಗೆ ಬರಲಿದ್ದು, ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಮಾವೇಶ ನಡೆಯಲಿದೆ. ದೇಶದ ರೈತರಿಂದ ಸಂಗ್ರಹಿಸಿರುವ ಸಹಿ ಸಂಗ್ರಹದ ಮನವಿ ಪತ್ರವನ್ನು ಪ್ರಧಾನಿಗೆ ಸಲ್ಲಿಸಲಾಗುವುದು. ಆದ್ದರಿಂದ ತಾಲೂಕಿನ ಹಾಗೂ ಜಿಲ್ಲೆಯ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿ ಸಹಿ ಸಂಗ್ರಹ ಪತ್ರಗಳನ್ನು ನೀಡಬೇಕೆಂದು ಅತ್ತಹಳ್ಳಿ ದೇವರಾಜ್ ಮನವಿ ಮಾಡಿದರು.
ರೈತ ಜಾಗೃತಿ ಕಾರ್ಯಕ್ರಮದಲ್ಲಿ ಬನ್ನೂರು ಸೂರಿ, ಅತ್ತಹಳ್ಳಿ ಎ.ಎನ್.ಮಹೇಶ್, ಪಿ.ನವೀನ್, ಕುಂತನಹಳ್ಳಿ ಕುಳ್ಳೇಗೌಡ, ಸ್ವಾಮಿ, ಮಹೇಶ್, ಮಹಿಳಾ ಸಂಘದ ಗೌರಮ್ಮ, ನಂಜಮಣಿ, ಮಹದೇವಮ್ಮ, ಪೂಜಾ, ಅರ್ಪಿತಾ, ಮಂಗಳಗೌರಿ, ಚಾಮನಹಳ್ಳಿ ನಿಂಗೇಗೌಡ, ಕರಿಯಪ್ಪ, ಬನ್ನೂರು ರವಿ, ಶಂಕರ್, ಬೆಟ್ಟಯ್ಯ ಚಂದ್ರು ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net