ಕಳೆದ 50 ವರ್ಷ ಕಾಲ ಜಿಲ್ಲೆ, ರಾಜ್ಯದ ಮೇಲೆ ರಾಜಕೀಯ ಪ್ರಭಾವ ಬೀರಿದ್ದ ಸಿದ್ದರಾಮಯ್ಯ ಕಾಂಗ್ರೆಸ್‌ನ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿದ್ದು, ಇದರೊಂದಿಗೆ 77 ವರ್ಷ ವಯಸ್ಸಿನ ಹುಟ್ಟುಹೋರಾಟಗಾರ ಸಿದ್ದರಾಮಯ್ಯ ಅವರ ‘ರಾಜಕೀಯದ ಯುಗಾಂತ್ಯ’ಗೊಂಡಿದೆ. ‘ಹುಲಿಯಾ’ ಸಂಧ್ಯಾ ಕಾಲದ ರಾಜಕೀಯ ಬದುಕು ಮತ್ತೊಂದು ಮಗ್ಗಲು ಬದಲಿಸಿದ್ದು, ಅಧಿಕಾರ ಕೇಂದ್ರದಿಂದ ತೆರೆಮರೆಗೆ ಸರಿಯುವಂತಾಗಿದೆ. ಇದು ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಲ್ಲಿ ಕಳವಳ ಮೂಡಿಸಿದೆ.