ಸಚಿವ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ನಡೆಸಿದೆ. ಎರಡು ಬಾರಿ ಅವರಿಂದ ರಾಜೀನಾಮೆ ಕೊಡುವಂತೆ ಮಾಡಿದರು. ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೊಡುವ ಅವಶ್ಯಕತೆ ಇರಲಿಲ್ಲ. ಇಡಿ, ಸಿಬಿಐನಲ್ಲಿ ನಾಗೇಂದ್ರ ಹೆಸರು ಉಲ್ಲೇಖ ಇಲ್ಲ. ನಾಗೇಂದ್ರ ಹಣದ ಪಡೆದಿರುವ ಬಗ್ಗೆಯೂ ಸಾಕ್ಷಿಯೂ ಇಲ್ಲ ನಾನು ಗೃಹ ಮಂತ್ರಿ ಆಗಿದ್ದಾಗಲೇ ಶೇ.79 ಹಣ ರಿಕವರಿ ಆಗಿತ್ತು. ಉಳಿದ 5 ಕೋಟಿ ಹಣ ರಿಕವರಿ ಆಗುತ್ತಿದೆ. ಅಲ್ಲೆಲ್ಲೂ ನಾಗೇಂದ್ರ ಹೆಸರು ಇಲ್ಲ. ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿ ಬಗ್ಗೆ ಜನರ ಮುಂದೆ ತಿಳಿಸುತ್ತೇವೆ. ಬಿಜೆಪಿಯವರು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿ ಎಂದರೂ ಕೇಳಲಿಲ್ಲ, ಅವರು ಬರಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.