ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ನಾಲ್ಕು ಬಾರಿ ಕರ್ನಾಟಕ ತಂಡವನ್ನು ಮುನ್ನಡೆಸಿದ ಶಿಲ್ಪಾ, ಬಳಿಕ ಕೋಚ್ ರಾಘವೇಂದ್ರ ಅವರ ಸಲಹೆಯಂತೆ ವೈಯಕ್ತಿಕ ಸ್ಪರ್ಧೆಗಳಾದ ಶಾಟ್‌ಪಟ್ ಮತ್ತು ಡಿಸ್ಕಸ್ ಥ್ರೋ ಕಡೆ ಗಮನ ಹರಿಸಿದರು. 2024ರಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ.ಈಶಾನ್ ಅವರಿಂದ ತರಬೇತಿ ಪಡೆದ ಅವರು, ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನಾರ್ಹ ಸಾಧನೆ ಮಾಡಿದರು.