ಶಿಬಿರಗಳು ಹೊಸ ಚೈತನ್ಯ ನೀಡುತ್ತವೆ

      ಸುತ್ತೂರಿನಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ-ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಹಾಗೂ ದಂತವೈದ್ಯ-ಹೌಸ್ ಸರ್ಜನ್‌ಗಳ ಶಿಬಿರವನ್ನು ಡಾ. ಸಿ.ಡಿ. ಶ್ರೀನಿವಾಸಮೂರ್ತಿ ಉದ್ಘಾಟಿಸಿದರು. ಡಾ. ಬಿ. ಸುರೇಶ್, ಡಾ. ಪಿ.ಕೆ.ಎಂ. ಪ್ರಶಾಂತ್, ಡಾ. ಬಿ. ನಾಗಶ್ರೀ, ಡಾ. ಪಿ. ಅಶೋಕ, ಡಾ. ಪಿ.ಕೆ. ಅಂಬಿಕಾತನಯ, ಡಾ. ಪುರುಷೋತ್ತಮ ಶಾಸ್ತ್ರಿ ಇದ್ದರು.

Published on
ಸುತ್ತೂರು: ಶಿಬಿರಗಳು ಹೊಸ ಚೈತನ್ಯ ನೀಡುತ್ತವೆ ಎಂದು ಮೈಸೂರಿನ ಹಿರಿಯ ವೈದ್ಯಡಾ. ಸಿ.ಡಿ. ಶ್ರೀನಿವಾಸಮೂರ್ತಿ ಹೇಳಿದರು.
ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ವೈದ್ಯಕೀಯ-ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಹಾಗೂ ದಂತವೈದ್ಯ-ಹೌಸ್ ಸರ್ಜನ್‌ರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ವೈದ್ಯರು ರೋಗಿಗಳೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸಬೇಕು. ಚಿಕಿತ್ಸಾ ವಿಧಾನಗಳಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಮೊಬೈಲ್ ಅಪ್‌ಡೇಟ್‌ನಂತೆ ನಾವು ನಿರಂತರವಾಗಿ ಅಪ್‌ಡೇಟ್ ಮಾಡಿಕೊಳ್ಳುತ್ತಾ ವೃತ್ತಿಯಲ್ಲಿ ನಿಪುಣತೆ ಹೊಂದಬೇಕು ಎಂದರು.
ಧರ್ಮದ ಮೂಲಮಂತ್ರವೇ ದಯೆ ಮತ್ತು ಕರುಣೆ. ಅದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ಕೆ.ಎಂ. ಪ್ರಶಾಂತ್ ಮಾತನಾಡಿ, ವೈದ್ಯರು ಮಾನವೀಯತೆ, ಹೃದಯವಂತಿಕೆಯಿಂದ ಜನರ ಬದುಕಿಗೆ ಬೆಳಕಾಗಬೇಕು ಎಂದರು.
ಪ್ರತಿ ರೋಗಿಯಲ್ಲಿಯೂ ಭಗವಂತನಿದ್ದಾನೆಂದು ಭಾವಿಸಿ ಚಿಕಿತ್ಸೆ ನೀಡಬೇಕು. ಸ್ವಾತಂತ್ರ್ಯ ಪೂರ್ವಕ್ಕೆ ಹೋಲಿಸಿದರೆ ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಕಡಿಮೆಯಾಗಿದೆ. ಇದರಲ್ಲಿ ವೈದ್ಯಕೀಯ ಕ್ಷೇತ್ರದ ಕೊಡುಗೆಯೂ ಮುಖ್ಯವಾಗಿದೆ ಎಂದು ನುಡಿದರು.
ಜೆಎಸ್‌ಎಸ್ ಎಎಚ್‌ಇಆರ್ ಸಮ ಕುಲಾಧಿಪತಿ ಡಾ. ಬಿ. ಸುರೇಶ್ ಮಾತನಾಡಿ,
ಭವಿಷ್ಯದ ಪ್ರಪಂಚವನ್ನು ದೃಷ್ಠಿಯಲ್ಲಿಟ್ಟುಕೊಂಡು ವೈದ್ಯರುಗಳು ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಡಾ. ಬಿ. ನಾಗಶ್ರೀ, ಡಾ. ಪಿ. ಅಶೋಕ, ಡಾ. ಪಿ.ಕೆ. ಅಂಬಿಕಾತನಯ, ಡಾ. ಪುರುಷೋತ್ತಮ ಶಾಸ್ತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net