ಹಿಂದು ಧರ್ಮದ ಆಧ್ಯಾತ್ಮಿಕ ಅಡಿಪಾಯ ರೂಪಿಸಿದ ಆಚಾರ್ಯತ್ರಯರು :

ಮೈಸೂರು ವಕೀಲರ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾರ್ಶನಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ರಾಮಾನುಜಾಚಾರ್ಯ, ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ಮಧ್ವಾಚಾರ್ಯ ಅವರ ಭಾವಚಿತ್ರಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ಪುಷ್ಪಾರ್ಚನೆ ನೆರವೇರಿಸಿದರು. ಎಸ್. ಲೋಕೇಶ್, ಎಂ.ವಿ. ಚಂದ್ರಶೇಖರ, ಎ.ಜಿ. ಸುಧೀರ್, ಎಚ್.ಬಿ. ಭರತ್, ಕೆ.ಆರ್. ನಾಗರಾಜ ಇದ್ದರು.

Published on
ಮೈಸೂರು: ಹಿಂದು ಧರ್ಮದ ಸೈದ್ಧಾಂತಿ, ಆಧ್ಯಾತ್ಮಿಕ ಹಾಗೂ ತಾತ್ವಿಕ ಅಡಿಪಾಯವನ್ನು ಶ್ರೀ ರಾಮಾನುಜಾಚಾರ್ಯ, ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ಮಧ್ವಾಚಾರ್ಯ ರೂಪಿಸಿದರು ಎಂದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ ಹೇಳಿದರು.
ಮೈಸೂರು ವಕೀಲರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾರ್ಶನಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಆದಿಶಂಕರಾಚಾರ್ಯರು ದೇಶದಲ್ಲಿ 4 ಮಠಗಳನ್ನು ಸ್ಥಾಪಿಸಿದರು. ಇವರು ಅಹಿಂಸೆ, ಆತ್ಮ, ಬ್ರಹ್ಮ ಒಂದೇ ಎಂಬ ವಾದ ಹೊಂದಿದವರಾಗಿದ್ದರು. ಇವರು ಕೇರಳದಲ್ಲಿ ಜನಿಸಿ ದೇಶ್ಯಾದ್ಯಂತ ಧರ್ಮ ಪ್ರಚಾರ ನಡೆಸಿದರು ಎಂದು ಹೇಳಿದರು.
ಶ್ರೀ ರಾಮಾನುಜಾಚಾರ್ಯರು ಭಕ್ತಿ ಚಳವಳಿಗೆ ಅಡಿಪಾಯ ಹಾಕಿದರು ಮತ್ತು ಸಾಮಾಜಿಕ ಸಮಾನತೆಗೆ ಶ್ರಮಿಸಿದರು. ಶ್ರೀ ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಎಂಬ ವಾದವನ್ನು ಹೊಂದಿದ್ದರು. ಶ್ರೀ ರಾಮಾನುಜಾಚಾರ್ಯ, ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ಮಧ್ವಾಚಾರ್ಯ ಅವರ ತತ್ವಗಳು ಪ್ರಸಿದ್ಧವಾಗಿತ್ತು. ಇವರ ತತ್ವದ ಪರಿಣಾಮ ಬೌದ್ಧ ಹಾಗೂ ಜೈನ ಧರ್ಮ ದೇಶದಲ್ಲಿ ಕ್ಷೀಣಿಸಿ ಹಿಂದು ಧರ್ಮ ಉಚ್ಛ್ರಾಯ ಸ್ಥಿತಿಗೆ ಮರಳಿ. ಇವರ ತತ್ವ, ಆದರ್ಶಗಳನ್ನು ಯುವಜನರು ತಿಳಿದು ಪಾಲಿಸಿದರೆ ದೇಶದಲ್ಲಿ ಕಾನೂನುಗಳ ಅವಶ್ಯಕತೆ ನಿರ್ಮಾಣ ಆಗುವುದಿಲ್ಲ ಎಂದು ಹೇಳಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಉಪಾಧ್ಯಕ್ಷ ಎಂ.ವಿ. ಚಂದ್ರಶೇಖರ, ಕಾರ್ಯದರ್ಶಿ ಎ.ಜಿ. ಸುಧೀರ್, ಖಜಾಂಚಿ ಎಚ್.ಬಿ. ಭರತ್, ಹಿರಿಯ ವಕೀಲ ಕೆ.ಆರ್. ನಾಗರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net