ಶ್ರೀಗಂಧ ಮರದ ಮೌಲ್ಯಕ್ಕೆ ಸಂಬಂಧಿಸಿದಂತೆ ದರಗಳನ್ನು ಪ್ರತಿ ಹಣಕಾಸು ವರ್ಷದಲ್ಲಿಯೂ ಶ್ರೀಗಂಧದ ಮರಕ್ಕೆ ರಾಜ್ಯದಲ್ಲಿ ಮಾಡಲಾದ ಹರಾಜು ಮಾರಾಟದಲ್ಲಿ ಸಂದಾಯವಾದ ಸರಾಸರಿ ದರದ ಆಧಾರದ ಮೇಲೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ನಿಗದಿಪಡಿಸಬೇಕು, ಒಂದು ವೇಳೆ ಇತ್ತೀಚೆಗೆ ಕರ್ನಾಟಕದಲ್ಲಿ ಯಾವುದೇ ಹರಾಜು ಮಾಡಲಾಗಿರದಿದ್ದಲ್ಲಿ ತಮಿಳುನಾಡಿನಲ್ಲಿ ಮಾಡಿದ ಹರಾಜಿನಲ್ಲಿ ಸಂದಾಯವಾದ ಸರಾಸರಿ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ವಿನಾಯಕ ಭಟ್ಟ, ಹನಗೋಡು ಬಸವರಾಜ್ ಇದ್ದರು.