ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಗ್ರಾಮದಲ್ಲಿ ‘ಕಾಫಿ ಮತ್ತು ಕಾಳುಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ’ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿತ್ತು. ರಮೇಶ್‌ಕುಮಾರ್, ಡಾ. ನದಾಫ್, ಕಿರಣ್‌ಕುಮಾರ್, ರಾಜಶೇಖರ್, ಅಜಿತ್ ಮಂದಣ್ಣ, ಕರುಂಬಯ್ಯ ಇದ್ದರು.
ಕಾಫಿ, ಕಾಳುಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ
ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ರಸಗೊಬ್ಬರ ಕಂಪನಿ ಹಾಗೂ ಕೆ.ಸಿ.ಮಂದಣ್ಣ ಆ್ಯಂಡ್ ಕೋ ಸಹಯೋಗದಲ್ಲಿ ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಗ್ರಾಮದಲ್ಲಿ ‘ಕಾಫಿ ಮತ್ತು ಕಾಳು ಮೆಣಸಿನಲ್ಲಿ ಪೋಷಕಾಂಶಗಳ ನಿರ್ವಹಣೆ’ ಕುರಿತು ಶನಿವಾರ ವಿಚಾರಸಂಕಿರಣ ಅಯೋಜಿಸಲಾಗಿತ್ತು.
ಈ ವೇಳೆ ಕಂಪನಿ ವತಿಯಿಂದ ವಿಭಾಗಿಯ ಬೇಸಾಯ ತಜ್ಞ ರಮೇಶ್ ಕುಮಾರ್ ಮಾತನಾಡಿ, ಕಂಪನಿಯ ಹಿನ್ನೆಲೆ, ಕಾಫಿ ಬೆಳೆಗೆ ಕಂಪನಿಯಲ್ಲಿರುವ ಉತ್ಪನ್ನಗಳ ಮಾಹಿತಿಯನ್ನು ನೀಡಿದರು. ಜತೆಗೆ ಎಲೆ ಮತ್ತು ಮಣ್ಣು ಪರೀಕ್ಷೆಯ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಫಿ ಬೋರ್ಡ್ ವತಿಯಿಂದ ಮಣ್ಣು ವಿಜ್ಞಾನಿ ಡಾ. ನದಾಫ್ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಕಂಪನಿ ವತಿಯಿಂದ ಕಿರಣ್ ಕುಮಾರ್, ರಾಜಶೇಖರ್ ಹಾಗೂ ಕೆ.ಸಿ.ಮಂದಣ್ಣ ಆ್ಯಂಡ್ ಕೋ ರಸಗೊಬ್ಬರ ಅಂಗಡಿಯ ಮಾಲೀಕರಾದ ಅಜಿತ್ ಮಂದಣ್ಣ, ಕರುಂಬಯ್ಯ ಹಾಗೂ ಬೆಳೆಗಾರರು ಇದ್ದರು.