ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ವಿಭಾಗದಿಂದ ಒಟ್ಟು 729 ಕ್ರೀಡಾಪಟುಗಳು ಭಾಗವಹಿಸಿದ್ದು, ಇವರಲ್ಲಿ 611 ಪುರುಷರು ಹಾಗೂ 118 ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾ ತಂಡಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕೇರಂ, ಬ್ಯಾಸ್ಕೆಟ್ ಬಾಲ್, ಈಜು, ವಾಲಿಬಾಲ್, ಚೆಸ್, ಟೆಬಲ್ ಟೆನ್ನಿಸ್, ಷಟಲ್ ಬ್ಯಾಡ್ಮಿಂಟನ್, ಕ್ರಿಕೆಟ್, ಸ್ನೂಕರ್, ಯೋಗ, ಹಾಕಿ, ಟೆಬಲ್ ಟೆನ್ನಿಸ್, ಫುಟ್ಬಾಲ್, ಕಬಡ್ಡಿ, ಲಾನ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ದೇಹದಾರ್ಢ್ಯ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಯಿತು.