ಮೂಗೂರಿನ ಕೆ ಪಿಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಎತ್ತಿನಗಾಡಿಯಲ್ಲಿ ಬಂದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ತಹಸೀಲ್ದಾರ್ ಸುರೇಶಾಚಾರ್ಯ, ಬಿಆರ್‌ಸಿ ನಾಗೇಶ, ಉಪಪ್ರಾಂಶುಪಾಲ ಪುಟ್ಟಸ್ವಾಮಿ, ಮುಖ್ಯ ಶಿಕ್ಷಕ ಕೃಷ್ಣೇಗೌಡ, ರೇಖಾ, ಚಂದ್ರಿಕಾ, ಶ್ವೇತಾ, ತುಳಸಿ ಇತರರು ಇದ್ದರು.
ಮೂಗೂರು : ಇಲ್ಲಿನ ಕೆ. ಪಿ.ಎಸ್. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಶೃಂಗಾರಗೊಂಡ ಎತ್ತಿನಗಾಡಿಯಲ್ಲಿ ವಿವಿಧ ವೇಷ ಭೂಷಣ ಧರಿಸಿ, ವೀರಗಾಸೆ ಕುಣಿತದೊಂದಿಗೆ ಆಗಮಿಸಿದ ಚಿಣ್ಣರನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು, ಗ್ರಾಮದ ಪ್ರಮುಖರು, ಶಿಕ್ಷಕರು ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮಕ್ಕಳಿಗೆ ಮಕ್ಕಳಿಗೆ ಸಿಹಿ ಹಂಚಿ, ಪುಷ್ಪ ನೀಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ನಂತರ ಮಕ್ಕಳು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶಾಲಾ ದಾಖಲಾತಿ ಆಂದೋಲನ ಜಾಥಾ ನಡೆಸಿ ಎಲ್ಲರ ಗಮನ ಸೆಳೆದರು.
ಪಾಲಕರ ಸಭೆ: ಶಾಲೆಯ ಪ್ರಾರಂಭೋತ್ಸವದ ದಿನವೇ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ ತಿ. ನರಸೀಪುರ ತಹಸೀಲ್ದಾರ್ ಸುರೇಶಾಚಾರ್ಯ ಅಧ್ಯಕ್ಷತೆಯಲ್ಲಿ
ಪಾಲಕರ ಸಭೆ ನಡೆಯಿತು. ಮೂಗೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿ. ರೇಣುಕ ಈ ಸಂದರ್ಭ ಮಾತನಾಡಿ, ತಾಲೂಕಿನಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆ ಪಡೆದ ಈ ವಿದ್ಯಾಲಯ ಉತ್ತಮ ಫಲಿತಾಂಶ ಪಡೆಯುವ ಮೂಲಕ ಸಾಧನೆ ತೋರಿದೆ ಎಂದರು. ಸರ್ಕಾರವು ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯವನ್ನೂ ಈ ಶಾಲೆಗೆ ನೀಡುತ್ತಿದೆ. ಪಾಲಕರು ಖಾಸಗಿ ಶಾಲೆಯ ವ್ಯಾಮೋಹ ಕೈ ಬಿಟ್ಟು ಸರ್ಕಾರಿ ಶಾಲೆಗೇ ಮಕ್ಕಳನ್ನು ದಾಖಲಿಸಬೇಕು
ಎಂದು ಅವರು ಹೇಳಿದರು. ಬಿ.ಆರ್.ಸಿ. ನಾಗೇಶ್, ಉಪ ಪ್ರಾಂಶುಪಾಲ ಸಿ, ಪುಟ್ಟಸ್ವಾಮಿ,ಎಸ್‌ಡಿಎಂಸಿ ಅಧ್ಯಕ್ಷ ಎಂ.ಕೆ.ಬಾಲಶಂಕರ್, ಉಪಾಧ್ಯಕ್ಷೆ ಅಶ್ವಿನಿ, ಮುಖ್ಯ ಶಿಕ್ಷಕ ಕೃಷ್ಣೇಗೌಡ, ಮಧು, ಮಹದೇವ ಸ್ವಾಮಿ, ರೇಖಾ, ಚಂದ್ರಿಕಾ, ಶ್ವೇತಾ, ತುಳಸಿ ಇದ್ದರು.