ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

ಹುಣಸೂರು ತಾಲೂಕು ಮುಳ್ಳೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲಾ ದಾಖಲಾತಿ ಆಂದೋಲನ ರಥಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ ಚಾಲನೆ ನೀಡಿದರು. ಎಸ್.ವಸಂತಕುಮಾರ್, ಮೋಹನ್‌ಕುಮಾರ್, ಪ್ರಕಾಶ್, ರೀಟಾಮೇರಿ, ಪವಿತ್ರಾ, ಶೋಭಾ, ಗಿರಿಜಾಂಬಿಕಾ ಇದ್ದರು.
ಹುಣಸೂರು ತಾಲೂಕು ಮುಳ್ಳೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಾಲಾ ದಾಖಲಾತಿ ಆಂದೋಲನ ರಥಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ ಚಾಲನೆ ನೀಡಿದರು. ಎಸ್.ವಸಂತಕುಮಾರ್, ಮೋಹನ್‌ಕುಮಾರ್, ಪ್ರಕಾಶ್, ರೀಟಾಮೇರಿ, ಪವಿತ್ರಾ, ಶೋಭಾ, ಗಿರಿಜಾಂಬಿಕಾ ಇದ್ದರು.
Published on
ಹುಣಸೂರು: ತಾಲೂಕಿನ ಗಾವಡಗೆರೆ ಹೋಬಳಿ ಮುಳ್ಳೂರು ಕ್ಲಸ್ಟರ್ ವ್ಯಾಪ್ತಿಯಲ್ಲಿ ಶುಕ್ರವಾರ 2026-27ನೇ ಸಾಲಿನ ಶಾಲಾ ದಾಖಲಾತಿ ಆಂದೋಲನ ರಥಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿಸಿ ಗುಣಮಟ್ಟದ ಶಿಕ್ಷಣ ನೀಡುವುದೇ ಶಾಲಾ ಶಿಕ್ಷಣ ಇಲಾಖೆ ಉದ್ದೇಶ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು, ಗ್ರಾಮೀಣ ಪ್ರದೇಶದಲ್ಲಿನ 6 ರಿಂದ 14 ವರ್ಷದ ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿಕೊಳ್ಳುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕು ಎಂದು ಹೇಳಿದರು.
ಮುಳ್ಳೂರು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವಸಂತ ಕುಮಾರ್ ಸರ್ಕಾರದಿಂದ ಉಚಿತವಾಗಿ ಶಾಲಾ ಮಕ್ಕಳಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಮೋಹನ ಕುಮಾರ, ಪ್ರಕಾಶ, ಪುಟ್ಟರಾಜು, ರೀಟಾ ಮೇರಿ, ಶ್ರೀನಿವಾಸ, ಸ್ವಾಮಿ, ಧ್ರುವಣ್ಣ, ದೇವಪ್ಪ, ಶೋಭಾ, ಹರೀಶ, ಮಂಜುನಾಥ, ಗಿರಿಜಾಂಬಿಕಾ, ಜಗದೀಶ, ಶ್ರೀರಾಮ, ಪುಟ್ಟರಾಜು, ಸಣ್ಣಸ್ವಾಮಿ, ಕಮಲಾಕ್ಷಿ, ಬಸವರಾಜು, ಪವಿತ್ರಾ, ಪಾಂಡುರಂಗ ಕದಂ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net