ಮಧ್ಯಮ ವರ್ಗದವರಿಗೂ ಉತ್ತಮ ಶಿಕ್ಷಣ ದೊರೆಯಲಿ

ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಪ್ರಾರಂಭೋತ್ಸವ ಸಂದರ್ಭ  ಇನ್ಫೊಟೆಕ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕೆಂಪೇಗೌಡ 1 ಲಕ್ಷರೂ ಮೌಲ್ಯದ ವಿವಿಧ ಬಗೆಯ ಆಟಿಕೆಗಳನ್ನು ಹಸ್ತಾಂತರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಶಿವಮೂರ್ತಿ, ಅಶ್ವಿನಿ ಕೆಂಪೇಗೌಡ, ನಾಗರಾಜು, ವೈ.ಎ. ಪುಟ್ಟರಾಜು ಇತರರು ಇದ್ದರು.
ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಪ್ರಾರಂಭೋತ್ಸವ ಸಂದರ್ಭ ಇನ್ಫೊಟೆಕ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕೆಂಪೇಗೌಡ 1 ಲಕ್ಷರೂ ಮೌಲ್ಯದ ವಿವಿಧ ಬಗೆಯ ಆಟಿಕೆಗಳನ್ನು ಹಸ್ತಾಂತರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಶಿವಮೂರ್ತಿ, ಅಶ್ವಿನಿ ಕೆಂಪೇಗೌಡ, ನಾಗರಾಜು, ವೈ.ಎ. ಪುಟ್ಟರಾಜು ಇತರರು ಇದ್ದರು.
Published on
ಬನ್ನೂರು: ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸಿ ಬಡವರ್ಗದವರಿಗೂ ಉತ್ತಮ ಶಿಕ್ಷಣ
ದೊರಕುವಂತೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಇನ್ಫೋಟೆಕ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಕೆಂಪೇಗೌಡ ಹೇಳಿದರು.
ಅವರು ಪಟ್ಟಣದ ಯಾಚೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ 1 ಲಕ್ಷರೂ ಮೌಲ್ಯದ ವಿವಿಧ ಬಗೆಯ ಆಟಿಕೆಯನ್ನು ಹಸ್ತಾಂತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಹೈಟೆಕ್ ಮಾದರಿ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿಯೇ ಕೊಡಿಸಬೇಕೆನ್ನುವ ಉದ್ದೇಶದೊಂದಿಗೆ ಹಲವು ಯೋಜನೆಯನ್ನು ರೂಪಿಸಬೇಕು. ಅದಕ್ಕೆ ಸ್ವಯಂಸೇವಾ ಸಂಘ, ಸಂಸ್ಥೆಗಳ ನೆರವು
ಪಡೆದುಕೊಳ್ಳಬೇಕು ಎಂದವರು ಸಲಹೆ ನೀಡಿದರು. ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಯಲ್ಲಿ ದಾಖಲಾತಿಯನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿದೆ. ಸರ್ಕಾರಿ ಶಾಲೆಯಲ್ಲಿ ಓದಿದವರೇ ಸಮಾಜದ ವಿವಿಧ ಸ್ತರಗಳಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಹಲವರನ್ನು ಆಕರ್ಷಿಸಿದೆ. ಇದಕ್ಕೆ ಸರಿಸಮನಾಗಿ ಸರ್ಕಾರಿ ಶಾಲೆಯಲ್ಲೇ ದ್ವಿಭಾಷಾ ಶಿಕ್ಷಣದ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ. ಪಾಲಕರು ಸರ್ಕಾರಿ ಶಾಲೆಯಲ್ಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಕೊಡಿಸಲು ಮಕ್ಕಳನ್ನು ದಾಖಲು ಮಾಡಬೇಕು ಎಂದರು.
ಸಹಕಾರ ನೀಡಬೇಕು:
ಕ್ಷೇತ್ರಶಿಕ್ಷಣಾಧಿಕಾರಿ ಶಿವಮೂರ್ತಿ ಮಾತನಾಡಿ, ಇಂದು ಯಾಚೇನಹಳ್ಳಿ ಸರ್ಕಾರಿ ಶಾಲೆಯನ್ನು ನೋಡಿದರೆ ಇದು ಸರ್ಕಾರಿ ಶಾಲೆಯೇ ಎನ್ನುವಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿರುವುದು ಮಾದರಿ ಎನಿಸಿದೆ ಎಂದರು.
ಹಳೆಯ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಶಾಲೆಯ ಅಭಿವೃದ್ಧಿ ಯಾವ ಮಟ್ಟಕ್ಕೆ ಆಗುತ್ತದೆ
ಎಂಬುದನ್ನು ಕೆಂಪೇಗೌಡರು ಮಾಡಿ ತೋರಿಸಿದ್ದಾರೆ. ಎಲ್ಲ ಕಡೆಗಳಲ್ಲೂ ಇಂತಹ ಹಿರಿಯ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಗ್ರಾಮದ ಮುಖಂಡರು ಮತ್ತು ಶಾಲಾ ಸಿಬ್ಬಂದಿ ಸಹಕಾರ ನೀಡಬೇಕು. ಆಗ ಖಾಸಗಿ ಶಾಲೆಗಳಿಗಿಂತ ಉತ್ತಮ ಸೌಕರ್ಯಗಳನ್ನು ಸರ್ಕಾರಿ ಶಾಲೆಗಳಲ್ಲೂ ಕಲ್ಪಿಸಿಕೊಡಬಹುದು ಎಂದರು.
ಶಾಲೆಯ ಆರಂಭದಿಂದಲೇ ವಿದ್ಯಾರ್ಥಿಗಳು ಶಾಲೆಗೆ ಬಂದು ಇಲಾಖೆಯಿಂದ ನಿಗದಿಪಡಿಸಿರುವ ಬೋಧನಾ ಕಲಿಕಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಪಾಲಕರು ಗಮನ ಹರಿಸಬೇಕೆಂದು ಅವರು ತಿಳಿಸಿದರು.
ಪೋಷಕಾಂಶದಿಂದ ಯಾವುದೇ ಮಕ್ಕಳು ಬಳಲದೇ ಇರಲೆಂದು ಪ್ರತಿದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದ ಅವರು, ಸರ್ಕಾರಿ ಶಾಲೆ ಮಕ್ಕಳಿಗೆ ಸರ್ಕಾರದ ವತಿಯಿಂದ ದೊರೆಯುತ್ತಿರುವ ವಿವಿಧ ಸೌಲಭ್ಯಗಳ ಬಗ್ಗೆ
ಮಾಹಿತಿ ನೀಡಿದರು. ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಯ ಕಟ್ಟಡವನ್ನು ನವೀಕರಣ ಮಾಡಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್‌ಗಳನ್ನು ಒದಗಿಸಲಾಗಿದೆ. ಶಾಲೆಯನ್ನು ದತ್ತು ಪಡೆದಿರುವ ಇನ್ಫೋಟೆಕ್ ಫೌಂಡೇಶನ್ ಹಲವು ಸಾಧನಗಳನ್ನು ನೀಡುತ್ತಿರುವುದು ಅಭಿನಂದನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಬನ್ನೂರು ಹೋಬಳಿ ಘಟಕ ಅಧ್ಯಕ್ಷ ವೈ.ಎ. ಪುಟ್ಟರಾಜು, ಅಶ್ವಿನಿ ಕೆಂಪೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ಶಾಲೆಯ ಶಿಕ್ಷಕ ವೃಂದದವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net