ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ

ಕುವೆಂಪುನಗರದಲ್ಲಿರುವ ಶ್ರೀರಮಣ ಜ್ಞಾನ ಕೇಂದ್ರದ ಸಾಧನ ಮಂದಿರದಲ್ಲಿ ಸ್ವಾಮಿ ಹಂಸಾನಂದರ ಮಾರ್ಗದರ್ಶನದಲ್ಲಿ ಮಕ್ಕಳಿಗಾಗಿ ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ ಆಯೋಜಿಸಲಾಗಿತ್ತು.
ಕುವೆಂಪುನಗರದಲ್ಲಿರುವ ಶ್ರೀರಮಣ ಜ್ಞಾನ ಕೇಂದ್ರದ ಸಾಧನ ಮಂದಿರದಲ್ಲಿ ಸ್ವಾಮಿ ಹಂಸಾನಂದರ ಮಾರ್ಗದರ್ಶನದಲ್ಲಿ ಮಕ್ಕಳಿಗಾಗಿ ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳು ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ
  • ಪೂಜೆಯ ತತ್ತ್ವಾರ್ಥಗಳ ಬೋಧನೆ
ಮೈಸೂರು: ಕುವೆಂಪುನಗರದಲ್ಲಿರುವ ಶ್ರೀರಮಣ ಜ್ಞಾನ ಕೇಂದ್ರದ ಸಾಧನ ಮಂದಿರದಲ್ಲಿ ಸ್ವಾಮಿ ಹಂಸಾನಂದರ ಮಾರ್ಗದರ್ಶನದಲ್ಲಿ ಮಕ್ಕಳು ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ ಆಯೋಜಿಸಲಾಗಿತ್ತು.
15 ದಿನಗಳ ಕಾಲ ನಿರಂತರವಾಗಿ, ಮಕ್ಕಳಿಗೆ ಸರಸ್ವತಿ ಪೂಜೆಯ ಮಂತ್ರ ಉಚ್ಚಾರಣೆ, ಕ್ರಮವಿಧಿಗಳು ಮತ್ತು ಪೂಜೆಯ ತತ್ತ್ವಾರ್ಥಗಳನ್ನು ವಿವರವಾಗಿ ಬೋಧಿಸಲಾಯಿತು.
ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಶ್ರದ್ಧೆ ಮತ್ತು ನೈತಿಕ ಮೌಲ್ಯಗಳನ್ನೂ ಬೆಳೆಸುವುದು ಶಿಬಿರದ ಉದ್ದೇಶವಿತ್ತು. ಯಶಸ್ವಿಯಾಗಿ ಸಂಪನ್ನಗೊಂಡ ಶಿಬಿರ ಅಂತ್ಯದಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಯಿತು.
ಸ್ವಾಮಿ ಹಂಸಾನಂದರು ಮಾತನಾಡಿ, ಬಾಲ್ಯದಲ್ಲೇ ಧಾರ್ಮಿಕ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡುವುದು ಜೀವನ ರೂಪಿಸುವ ಮಹತ್ವದ ಹೆಜ್ಜೆ. ಮಕ್ಕಳು ಪೂಜಾ ವಿಧಾನ ಕಲಿಯುವುದು ನಮ್ಮ ಸಂಸ್ಕೃತಿ ಉಳಿಯುವ ದಾರಿ ಎಂದು ಹೇಳಿದರು.
ಕೇಂದ್ರದ ಕಾರ್ಯದರ್ಶಿ ಗೀತಾ ಚರಣ್, ವ್ಯವಸ್ಥಾಪಕ ಶಶಿಕುಮಾರ್, ಕೇಂದ್ರದ ಅಧ್ಯಾಪಕರು, ಭಕ್ತರು, ಪಾಲಕರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net