ಅಧ್ಯಕ್ಷರಾಗಿ ಚೈತ್ರಾ ಶಿವನಂಜು ಅವಿರೋಧ ಆಯ್ಕೆ

ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚೈತ್ರಾ ಶಿವನಂಜು ಅವರನ್ನು ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು. ಶ್ರೀನಿವಾಸ್, ಚಲುವ ಕೃಷ್ಣ, ಚಂದ್ರಿಕಾ ರಾಜಣ್ಣ, ಹೇಮಾವತಿ ರಮೇಶ್, ಸಣ್ಣ ತಾಯಮ್ಮ, ಏಜಾಜ್ ಪಾಷಾ ಇದ್ದರು.
ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಚೈತ್ರಾ ಶಿವನಂಜು ಅವರನ್ನು ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು. ಶ್ರೀನಿವಾಸ್, ಚಲುವ ಕೃಷ್ಣ, ಚಂದ್ರಿಕಾ ರಾಜಣ್ಣ, ಹೇಮಾವತಿ ರಮೇಶ್, ಸಣ್ಣ ತಾಯಮ್ಮ, ಏಜಾಜ್ ಪಾಷಾ ಇದ್ದರು.
Published on
ಸರಗೂರು: ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಚೈತ್ರಾ ಶಿವನಂಜು ಅವಿರೋಧ ಆಯ್ಕೆಯಾದರು.
ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚೈತ್ರಾ ಶಿವನಂಜು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಮೋಹನಕುಮಾರಿ ಅವಿರೋಧ ಆಯ್ಕೆ ಘೋಷಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ.ಸಂತೋಷ್ ಕುಮಾರ್, ಡಿ.ಟಿ.ಸುನೀಲ್ ಸಹಾಯಕರಾಗಿ ಕಾರ್ಯನಿರ್ವಹಿಸಿದರು. 
ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಶ್ರೀನಿವಾಸ್, ಚಲುವ ಕೃಷ್ಣ, ಚಂದ್ರಿಕಾ ರಾಜಣ್ಣ, ಹೇಮಾವತಿ ರಮೇಶ್, ಸಣ್ಣ ತಾಯಮ್ಮ, ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರಾದ ಏಜಾಜ್ ಪಾಷಾ, ಮನುಗನಹಳ್ಳಿ ಮಾದಪ್ಪ, ಮೈಮುಲ್ ಅಧ್ಯಕ್ಷ ಈರೇಗೌಡ, ಜಿಪಂ ಮಾಜಿ ಸದಸ್ಯ ಪಿ.ರವಿ, ಪುರಸಭೆ ಸದಸ್ಯ ಮಧು, ಕಾಂಗ್ರೆಸ್ ಪಕ್ಷದ ಟೌನ್ ಅಧ್ಯಕ್ಷ ಎಸ್.ಎನ್.ನಾಗರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು, ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ಮಂಜುನಾಥ, ರಂಗನಾಥ, ಜಲೀಲ್, ಮಕ್ ಪಿರುಲ್ಲಾ, ಟೌನ್ ಮಾಜಿ ಅಧ್ಯಕ್ಷ ಮಂಜುನಾಥ, ರಮೇಶ್, ನಾಗರಾಜು, ಆರ್ಯ ಮಹೇಶ್, ಬೆಟ್ಟಸ್ವಾಮಿ, ಚಾಮರಾಜು, ಚಲುವರಾಜು, ಅಮೀರ್, ಶಿವಶಂಕರ್, ಶಂಭುಲಿಂಗ ನಾಯಕ, ಬಿಲ್ಲಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಅಜರುದ್ದೀನ್, ರುದ್ರಯ್ಯ, ಮುಳ್ಳೂರು ಮಂಜು, ಬಸವರಾಜು, ಅಶೋಕ್,ಚಿನ್ನಯ್ಯ, ಸೋಮಣ್ಣ, ಪ್ರಭಾಕರ್, ಹಾಜರಿದ್ದರು. ಚುನಾವಣೆ ಬಳಿಕ ದೂರವಾಣಿ ಕರೆ ಮಾಡಿದ ಶಾಸಕ ಅನಿಲ್ ಚಿಕ್ಕಮಾದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net